ಡ್ರಗ್ಸ್ ಮಾಫಿಯಾ: ಮತ್ತೆ ವಿಚಾರಣೆಗೆ ಹಾಜರಾಗುವಂತೆ ನಟ ದಿಗಂತ್ ಗೆ ಸೂಚನೆ

Promotion

ಬೆಂಗಳೂರು,ಸೆಪ್ಟೆಂಬರ್,23,2020(www.justkannada.in) : ಡ್ರಗ್ಸ್ ಮಾಫಿಯಾ ಸಂಬಂಧಿಸಿದಂತೆ ನಟ ದಿಗಂತ್ ಗೆ ಎರಡನೇ ಬಾರಿಗೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟಿಸ್ ನೀಡಿದೆ.jk-logo-justkannada-logoಡ್ರಗ್ಸ್ ಮಾಫಿಯಾಕ್ಕೆ ಸಂಬಂಧಿಸಿದಂತೆ ಈಗಾಗಲೇ, ನಟ ದಿಗಂತ್ ಹಾಗೂ ಪತ್ನಿ ನಟಿ ಐಂದ್ರಿತಾ ರೈ ಇಬ್ಬರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು.  ಬಳಿಕ ಅವರನ್ನು ಬಿಡುಗಡೆ ಮಾಡಲಾಗಿತ್ತು.
Actor-Digant-instructed-re-attend-Drugs-Mafia- trialಆದರೆ, ದಿಗಂತ್ ನೀಡಿದ ಮಾಹಿತಿಯನ್ನು ಆಧರಿಸಿ ಮತ್ತೊಮ್ಮೆ ಇಂದು ಬೆಳಗ್ಗೆ 11ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಪ್ರತಿನಿತ್ಯ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಕೆದಕಿದಷ್ಟು ವಿಸ್ತರಿಸುತ್ತಿದೆ. ನೆನ್ನೆಯಷ್ಟೇ ನಟ ಲೂಸ್ ಮಾದ ಹಾಗೂ ಕಿರುತೆರೆಯ ನಟಿ, ನಟಿಯರು ವಿಚಾರಣೆಗೆ ಹಾಜರಾಗಿದ್ದರು.

key words : Actor-Digant-instructed-re-attend-Drugs-Mafia- trial