ನಟಿ ಇಝಾಬೆಲ್ ಜತೆ ವಿಜಯ್ ದೇವರಕೊಂಡ ಡೇಟಿಂಗ್

Promotion

ಹೈದರಾಬಾದ್, ಜುಲೈ 11, 2019 (www.justkannada.in): ವಿಜಯ್ ದೇವರಕೊಂಡ ನಟಿ ಇಝಾಬೆಲ್ ಲಿಟೆ ಜತೆ ಡೇಟಿಂಗ್ ನಲ್ಲಿಯದ್ದಾರೆಯೇ ಎಂಬ ಗಾಸಿಪ್ ಹರಿದಾಡುತ್ತಿದೆ.

ಇತ್ತೀಚೆಗೆ ಇಝಾಬೆಲ್ ತಮ್ಮ ಇನ್ ಸ್ಟಾಗ್ರಾಂನಲ್ಲಿ ವಿಜಯ್ ಅಪ್ಪಿಕೊಂಡಿರುವ ಫೋಟೋ ಅಪ್ ಲೋಡ್ ಮಾಡಿದ ಮೇಲೆ ಇಂತಹದ್ದೊಂದು ಅನುಮಾನ ಶುರುವಾಗಿದೆ.

ಸದ್ಯಕ್ಕೆ ಇಬ್ಬರೂ ಇನ್ನೂ ಹೆಸರಿಡದ ಚಿತ್ರವೊಂದರಲ್ಲಿ ಜೋಡಿಯಾಗಿ ಅಭಿನಯಿಸುತ್ತಿದ್ದಾರೆ. ಆದರೆ ಈ ಫೋಟೋ ಆ ಚಿತ್ರದ ದೃಶ್ಯದಂತಿಲ್ಲ. ಹೀಗಾಗಿ ವಿಜಯ್-ಇಝಾಬೆಲ್ ಡೇಟಿಂಗ್ ಮಾಡುತ್ತಿರಬಹುದು ಎಂಬ ಅನುಮಾನ ಹುಟ್ಟಿಕೊಂಡಿದೆ.