ಉತ್ತರ ಕರ್ನಾಟಕ ನೆರೆ ಸಂತ್ರಸ್ಥರಿಗೆ ನೆರವಾದ ಉಪೇಂದ್ರ

Promotion

ಬೆಂಗಳೂರು, ಆಗಸ್ಟ್ 09, 2019 (www.justkannada.in): ಉತ್ತರ ಕರ್ನಾಟಕ ಜನರ ನೆರವಿಗೆ ರಿಯಲ್ ಸ್ಟಾರ್ ಉಪೇಂದ್ರ ಮುಂದೆ ಬಂದಿದ್ದಾರೆ.

5 ಲಕ್ಷ ರೂ.ಹಣವನ್ನು ಉತ್ತರ ಕರ್ನಾಟಕದ ಜನರಿಗಾಗಿ ನೀಡಲು ತೀರ್ಮಾನಿಸಿದ್ದಾರೆ. ಈ ವಿಷಯವನ್ನು ಅಧಿಕೃತವಾಗಿ ಉಪೇಂದ್ರ ಅವರೇ ಫೇಸ್ ಬುಕ್ ನಲ್ಲಿ ಪ್ರಕಟಿಸಿದ್ದಾರೆ.

ಉಪೇಂದ್ರ ಕಾರ್ಯವನ್ನು ಅವರ ಅಭಿಮಾನಿಗಳು ಶ್ಲಾಘಿಸುತ್ತಿದ್ದಾರೆ. ಪ್ರತಿಯೊಬ್ಬರೂ ಉತ್ತರ ಕರ್ನಾಟಕದ ಜನತೆಗೆ ಇಚ್ಛಾನುಸಾರ ಸಹಾಯ ಮಾಡಬೇಕೆಂದು ಉಪೇಂದ್ರ ಕೋರಿದ್ದಾರೆ.