ನಟ ಸೂಪರ್ ಸ್ಟಾರ್ ರಜನಿಕಾಂತ್ ಸಂಭಾವನೆ ಹೆಚ್ಚಳ.

Promotion

ಚೆನ್ನೈ,ಮೇ,23,2022(www.justkannada.in): ತಮಿಳು ಸಿನಿಮಾರಂಗದ ಒಂದು ದಂತಕತೆಯಾಗಿರುವ ಇತಿಹಾಸದಲ್ಲಿ ನಟ ರಜನಿಕಾಂತ್ ಅಚ್ಚರಿ ಒಂದಕ್ಕೆ ಕಾರಣ ಆಗಿದ್ದಾರೆ. ನಟ ರಜನಿಕಾಂತ್ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ.

ನಿರ್ದೇಶಕ ನೆಲ್ಸನ್ ನಟ ರಜನಿಕಾಂತ್ ಮುಂದಿನ ಸಿನಿಮಾವನ್ನು ನಿರ್ಮಾಣ ಮಾಡುತ್ತಾ ಇದ್ದಾರೆ. ಇದು ನಟ ರಜನಿಕಾಂತ್ ಅವರ 169ನೇ ಸಿನಿಮಾ. ಇದೇ ಸಿನಿಮಾಗೆ ನಟ ರಜನಿಕಾಂತ್ 150 ಕೋಟಿ ರೂ. ಸಂಭಾವನೆ ಪಡೆದುಕೊಳ್ಳುತ್ತಿದ್ದಾರೆ.

ಇನ್ನು ಸಂಭಾವನೆಯ ವಿಚಾರದಲ್ಲಿ ನಟ ರಜನಿಕಾಂತ್ ಬಾಲಿವುಡ್ ಹೀರೋಗಳನ್ನು ಹಿಂದೆ ಹಾಕಿದ್ದಾರೆ. 100 ಕೋಟಿಗೂ ಅಧಿಕ ಸಂಭಾವನೆ ಪಡೆಯುತ್ತಿದ್ದ, ಬಾಲಿವುಡ್ ನಟರನ್ನು ಹಿಂದಿಕ್ಕಿ ನಟ ರಜನಿಕಾಂತ್ ನಂಬರ್ 1 ಆಗಿದ್ದಾರೆ. ಸಲ್ಮಾನ್ ಖಾನ್ 125, ಶಾರುಕ್ ಖಾನ್ 100, ಅಕ್ಷಯ್ ಕುಮಾರ್ 135 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ ಎಂದು ವರದಿ ಅಗಿದ್ದು, ಈಗ ನಟ ರಜನಿಕಾಂತ್ 150 ಕೋಟಿ ಸಂಭಾವನೆ ಪಡೆದು ಎಲ್ಲರನ್ನು ಹಿಂದಿಕ್ಕಿದ್ದಾರೆ.