‘ಸಲಗ’ ನಿರ್ದೇಶಕ ದುನಿಯಾ ವಿಜಿಗೆ ವಿಶ್ ಮಾಡಿದ ಕಿಚ್ಚ ಸುದೀಪ್

Promotion

ಬೆಂಗಳೂರು, ಮೇ 30, 2019 (www.justkannada.in): ಇದೇ ಮೊದಲ ಬಾರಿಗೆ ‘ಸಲಗ’ ಚಿತ್ರದ ಮೂಲಕ ದುನಿಯಾ ವಿಜಯ್ ನಿರ್ದೇಶನಕ್ಕೆ ಇಳಿದಿದ್ದಾರೆ.

ದುನಿಯಾ ವಿಜಿಗೆ ಹ್ಯಾಟ್ರಿಕ್ ಹೀರೋ ಶಿವಣ್ಣ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸೇರಿದಂತೆ ಅನೇಕರು ಶುಭ ಕೋರಿದ್ದಾರೆ.

ಇದೀಗ ನಟ ಕಿಚ್ಚ ಸುದೀಪ್ ಕೂಡ ವಿಶ್ ಮಾಡಿದ್ದಾರೆ. ಇನ್ನು ಈಗಾಗಲೇ ಈ ಚಿತ್ರವು ತನ್ನ ವಿಭಿನ್ನ ಟೀಸರ್ ಮತ್ತು ಪೋಸ್ಟರ್ ನಿಂದ ಸಾಕಷ್ಟು ಕುತೂಹಲ ಮೂಡಿಸಿದೆ.

‘ಡಾಲಿ’ ಧನಂಜಯ್ ಇಲ್ಲಿ ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಮಿಂಚುತ್ತಿದ್ದು, ಈ ಪಾತ್ರದ ಫೋಟೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.