ಅಭಿಮಾನಿಗಳ ಸೇವಾ ಕಾರ್ಯ ಕಂಡು ಖುಷಿ ಪಟ್ಟ ಕಿಚ್ಚ

Promotion

ಚಿಕ್ಕಮಗಳೂರು, ನವೆಂಬರ್ 07, 2019 (www.justkannada.in): ನಟ ಕಿಚ್ಚ ಸುದೀಪ್ ಅಭಿಮಾನಿಗಳು ಸಾಮಾಜಿಕ ಸೇವಾ ಕಾರ್ಯದ ಮೂಲಕ ಗಮನ ಸೆಳೆದಿದ್ದಾರೆ.

ಹೌದು. ಚಿಕ್ಕಮಗಳೂರು ಜಿಲ್ಲಾ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಸೇನಾ ಸಮಿತಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಿದ್ದ ಬೃಹತ್ ರಕ್ತದಾನ ಶಿಬಿರ ಕಾರ್ಯಕ್ರಮ ಯಶಸ್ವಿಯಾಗಿದೆ ನೆರವೇರಿದೆ.

ಈ ಕುರಿತಂತೆ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಅಭಿಮಾನಿಗಳ ಅಭಿಮಾನವನ್ನು ನೋಡಿದ ಕಿಚ್ಚ ಸುದೀಪ್ , ಹೆಮ್ಮೆಪಟ್ಟುಕೊಂಡಿದ್ದು, ಧನ್ಯವಾದಗಳನ್ನು ತಿಳಿಸಿದ್ದಾರೆ.