“ಪಾರ್ವತಿ” ಆನೆ ದತ್ತು ಪಡೆದ ನಟ ಶಿವರಾಜ್‍ ಕುಮಾರ್

Promotion

ಮೈಸೂರು.ಆಗಸ್ಟ್.20,2020(www.justkannada.in): ಕೆಲ ನಟರು, ಕಲಾವಿದರಿಗೆ ಪ್ರಾಣಿ ಪಕ್ಷಿಗಳೆಂದರೇ ಎಲ್ಲಿಲ್ಲದ ಪ್ರೀತಿ. ಇದಕ್ಕಾಗಿ ಪ್ರಾಣಿ ಪಕ್ಷಿಗಳನ್ನ ದತ್ತು ಪಡೆದು ಅವುಗಳನ್ನ ಸಾಕಿ ಸಲಹುತ್ತಾರೆ. ಅಂತೆಯೇ ಖ್ಯಾನ ಕನ್ನಡ ಚಲನಚಿತ್ರ ನಟ ಹ್ಯಾಟ್ರಿಕ್ ಹಿರೋ ಡಾ.ಶಿವರಾಜ್ ಕುಮಾರ್ ಅವರು ಮೈಸೂರು ಮೃಗಾಲಯದ ಭಾರತದ ಆನೆ “ಪಾರ್ವತಿ”ಯನ್ನು ಒಂದು ವರ್ಷದ ಅವಧಿಗೆ ದತ್ತು ಪಡೆದುಕೊಳ್ಳುವ ಮೂಲಕ ಪ್ರಾಣಿ ಮೇಲಿನ ಪ್ರೀತಿ ತೋರಿಸಿದ್ದಾರೆ. jk-logo-justkannada-logo

ಕೋವಿಡ್-19  ಸಂದರ್ಭದಲ್ಲಿ ನಟ ಶಿವರಾಜ ಕುಮಾರ್ ಅವರು ಭಾರತದ ಆನೆ “ಪಾರ್ವತಿ”ಯನ್ನು 20-08-2020 ರಿಂದ 19-08-2021 ರವರೆಗೆ ದತ್ತು ಪಡೆದಿದ್ದಾರೆ. ಈ ಮೂಲಕ ಮೃಗಾಲಯ ಮತ್ತು ಪ್ರಾಣಿಗಳ ನಿರ್ವಹಣೆಗೆ ಸಹಕಾರ ನೀಡಿರುವುದಕ್ಕೆ ಮೈಸೂರು ಮೃಗಾಲಯವು ಅಭಿನಂದಿಸುತ್ತದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿದೇಶಕರಾದ ಅಜಿತ್ ಕುಲಕರ್ಣಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.actor-shivraj-kumar-adopted-elephant-parvati-mysore-zoo

Key words: actor-Shivraj Kumar -adopted – elephant -“Parvati”-mysore zoo