ನಟ ಶಾರುಖ್  ಖಾನ್ ಪುತ್ರ ಆರ್ಯನ್ ಖಾನ್  ಜಾಮೀನು ಅರ್ಜಿ ವಜಾ.

Promotion

ಮುಂಬೈ,ಅಕ್ಟೋಬರ್,8,2021(www.justkannada.in): ‌ ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಶಾರುಖ್  ಖಾನ್ ಪುತ್ರ ಆರ್ಯನ್ ಖಾನ್  ಸಲ್ಲಿಸಿದ್ಧ ಜಾಮೀನು ಅರ್ಜಿಯನ್ನ ಮುಂಬೈ ಸೆಷನ್ಸ್ ವಜಾಗೊಳಿಸಿದೆ.

14 ದಿನಗಳ ನ್ಯಾಯಾಂಗ ಬಂಧನದಲ್ಲಿರುವ ಬಾಲಿವುಡ್‌ ನಟ ಶಾರುಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ ಸೇರಿ  8 ಮಂದಿ ಆರೋಪಿಗಳು ಜಾಮೀನು ಕೋರಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಇದೀಗ ಮುಂಬೈ ಸೆಷನ್ಸ್ ಕೋರ್ಟ್ ಆರ್ಯನ್‌ ಖಾನ್‌ 8 ಮಂದಿ ಆರೋಪಿಗಳ ಜಾಮೀನು ಅರ್ಜಿಯನ್ನ ವಜಾಗೊಳಿಸಿದೆ.

ನಿನ್ನೆಯಷ್ಟೇ ಆರ್ಯನ್‌ನ ಎನ್‌ಸಿಬಿ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಮುಂಬೈನ ಕಿಲ್ಲಾ ನ್ಯಾಯಾಲಯಕ್ಕೆ ವಿಚಾರಣೆಗಾಗಿ ಹಾಜರುಪಡೆಸಲಾಗಿತ್ತು. ನ್ಯಾಯಾಲಯ ಆರ್ಯನ್‌ ಸೇರಿ 7 ಆರೋಪಿಗಳನ್ನ ಮತ್ತೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ನೀಡಿತ್ತು. ಅರ್ಥರ್ ರೋಡ್ ಜೈಲಿಗೆ ಅರ್ಯನ್ ಖಾನ್   ಶಿಫ್ಟ್ ಮಾಡಲಾಗಿದೆ.

Key words: actor -Shah Rukh Khan- son Aryan Kha- dismissed – bail.