ಕೊರೊನಾ ಎಫೆಕ್ಟ್: ಬೇಬಿ ಸಿಟ್ಟರ್ ಆದ ರಿಷಬ್ ಶೆಟ್ರು !

Promotion

ಬೆಂಗಳೂರು, ಮಾರ್ಚ್ 20, 2020 (www.justkannada.in): ನಿರ್ದೇಶಕ, ನಟ ರಿಷಬ್ ಶೆಟ್ಟಿ ಈಗ ಬೇಬಿ ಸಿಟ್ಟರ್ ಆಗಿದ್ದಾರೆ!

ಹೌದು. ಕೊರೋನಾವೈರಸ್ ನಿಂದಾಗಿ ಸಿಕ್ಕ ಬಿಡುವಿನ ವೇಳೆಯನ್ನು ಚೆನ್ನಾಗಿಯೇ ಸದುಪಯೋಗಪಡಿಸಿಕೊಂಡಿದ್ದಾರೆ ರಿಷಬ್ ಶೆಟ್ಟಿ.

ಕೊರೋನಾದಿಂದಾಗಿ ಚಿತ್ರೀಕರಣ, ಸಿನಿಮಾ ಕೆಲಸಗಳು ಬಂದ್ ಆಗಿರುವ ಕಾರಣ ರಿಷಬ್ ತಮ್ಮ ತವರೂರಿಗೆ ಸಂಸಾರ ಸಮೇತ ಪ್ರಯಾಣ ಬೆಳೆಸಿದ್ದು, ತಮ್ಮ ಮುದ್ದು ಮಗನಿಗೆ ಮಜ್ಜನ ಮಾಡಿಸಿಕೊಂಡು ಪಕ್ಕಾ ಬೇಬಿ ಸಿಟ್ಟರ್ ಕೆಲಸ ಮಾಡಿಕೊಂಡು ಆರಾಮವಾಗಿದ್ದಾರೆ.

ಮಗುವಿಗೆ ಎಣ್ಣೆ ಹಚ್ಚುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ರಿಷಬ್ ನಮ್ದೂ ವರ್ಕ್ ಫ್ರಂ ಹೋಂ ಚೆನ್ನಾಗಿಯೇ ನಡೀತಿದೆ ಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ.