ಬೆತ್ತಲಾಗಿ ಸಂಕಷ್ಟಕ್ಕೆ ಸಿಲುಕಿದ ನಟ ರಣವೀರ್ ಸಿಂಗ್

Promotion

ಬೆಂಗಳೂರು, ಜುಲೈ 26, 2022 (www.justkannada.in): ಬಾಲಿವುಡ್‌ ನಟ ರಣವೀರ್‌ ಸಿಂಗ್‌ ವಿರುದ್ಧ ಚೆಂಬೂರು ಪೊಲೀಸ್‌ ಠಾಣೆಯಲ್ಲಿ ಅವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ನಟ ತಮ್ಮ ಚಿತ್ರಗಳ ಮೂಲಕ ಮಹಿಳೆಯರ ಭಾವನೆಗಳನ್ನು ನೋಯಿಸಿದ್ದಾರೆ ಎಂದು ಎನ್‌ಜಿಒ ಪದಾಧಿಕಾರಿಯೊಬ್ಬರು ಆರೋಪಿಸಿ ದೂರು ನೀಡಿದ್ದಾರೆ.

ಮುಂದೆ ಯುವ ಸಮುದಾಯದವರು ಅದನ್ನೇ ಆದರ್ಶ ಎಂದು ಭಾವಿಸಿಕೊಂಡು ರಣವೀರ್‌ ಸಿಂಗ್‌ ಅವರಂತೇ ವರ್ತಿಸುವ ಸಾಧ್ಯತೆ ಇದೆ. ಹೀಗಾಗಿ ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಇತ್ತೀಚಿಗೆ ಬಾಲಿವುಡ್‌ ನಟ ರಣವೀರ್‌ ಸಿಂಗ್‌ ಅವರ ಅರೆನಗ್ನ/ನಗ್ನ ಚಿತ್ರಗಳು ಇತ್ತೀಚೆಗೆ ನಿಯತಕಾಲಿಕೆಯೊಂದರಲ್ಲಿ ಪ್ರಕಟವಾಗಿತ್ತು.