ಅಭಿಷೇಕ್ ಅಂಬರೀಶ್ ಜತೆ ನಟಿಸಲು ಸಿದ್ಧರಿದ್ದ ಸೂಪರ್ ಸ್ಟಾರ್ ತಲೈವ

Promotion

ಬೆಂಗಳೂರು, ಮೇ 21, 2019 (www.justkannada.in): ಅಂಬಿ ಜತೆ ಸ್ನೇಹ ಸಂಪರ್ಕ ಇಟ್ಟುಕೊಂಡಿರುವವರಲ್ಲಿ ಸೂಪರ್ ಸ್ಟಾರ್ ರಜನೀಕಾಂತ್ ಕೂಡಾ ಒಬ್ಬರು.
ಅಂಬಿ ಮಗ ಅಭಿಷೇಕ್ ಸಿನಿಮಾಗೆ ಬರುತ್ತಿದ್ದಾರೆ ಎಂದು ತಿಳಿದಾಗ ರಜನಿ ಸಿಕ್ಕಾಪಟ್ಟೆ ಖುಷಿ ಪಟ್ಟಿದ್ದರಂತೆ! ಅಭಿಷೇಕ್ ಸಿನಿಮಾದಲ್ಲಿ ಒಂದು ಪಾತ್ರವನ್ನಾದರೂ ಕೊಡು ಎಂದು ನಿರ್ದೇಶಕ ನಾಗಶೇಖರ್ ಗೆ ಕೇಳಿಕೊಂಡಿದ್ದರಂತೆ!

ಈ ವಿಷಯವನ್ನು ಸ್ವತಃ ಚಿತ್ರದ ನಿರ್ದೇಶಕ ನಾಗಶೇಖರ್ ಹೇಳಿದ್ದಾರೆ. ಅಭಿಷೇಕ್ ಸಿನಿಮಾದಲ್ಲಿ ನಟಿಸಲು ಅವಕಾಶ ಕೊಡಿ ಎಂದು ರಜನಿ ಕೇಳಿದ್ದರಂತೆ.

ಈ ವಿಚಾರವನ್ನು ಅಂಬಿ ಬಳಿ ನಾಗಶೇಖರ್ ಹೇಳಿದಾಗ ಕಥೆಗೆ ಅಗತ್ಯ ಎನಿಸಿದ್ರೆ, ಅವರಿಗೆ ಒಪ್ಪುವಂತಹ ಪಾತ್ರವಿದ್ದರೆ ಮಾತ್ರ ಹೇಳು. ಅವರು ಸಿಕ್ತಾರೆ ಅಂತ ಯಾವ್ಯಾವುದೋ ಪಾತ್ರ ಮಾಡಿಸಿದ್ರೆ ಅವರ ಗೌರವ ಕಡಿಮೆ ಆಗುತ್ತದೆ ಎಂದಿದ್ದರಂತೆ ರೆಬೆಲ್ ಸ್ಟಾರ್.