ಸಿಎಂ ಬಿಎಸ್ ವೈ ಭೇಟಿ: ನೆರೆ ಸಂತ್ರಸ್ತರಿಗೆ ನೆರವಿನ ಹಸ್ತ ಚಾಚಿದ ನಟ ಪುನೀತ್ ರಾಜ್ ಕುಮಾರ್

Promotion

ಬೆಂಗಳೂರು,ಆ,15,2019(www.justkannada.in): ರಾಜ್ಯದಲ್ಲಿ ನೆರೆ ಹಾವಳಿ, ಪ್ರವಾಹದಿಂದ ನಲುಗಿರುವ ನೆರೆ ಸಂತ್ರಸ್ತರಿಗೆ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನೆರವಿನ ಹಸ್ತ ಚಾಚಿದ್ದಾರೆ.

ಹೌದು, ನಟ ಪುನೀತ್ ರಾಜ್ ಕುಮಾರ್ ಸಿಎಂ ಪರಿಹಾರ ನಿಧಿಗೆ 5 ಲಕ್ಷ ನೆರವು ನೀಡಿದ್ದಾರೆ. ಇಂದು ನಗರದ ಡಾಲರ್ಸ್ ಕಾಲೋನಿ ನಿವಾಸದಲ್ಲಿ ಸಿಎಂ ಬಿಎಸ್  ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ನಟ ಪುನೀತ್ ರಾಜ್ ಕುಮಾರ್  ಸಿಎಂ ಪರಿಹಾರ ನಿಧಿಗೆ 5 ಲಕ್ಷದ ಚೆಕ್ ಹಸ್ತಾಂತರಿಸಿದ್ದಾರೆ.

ಸಿಎಂ ಬಿಎಸ್ ವೈ ಭೇಟಿ ಬಳಿಕ ಮಾತನಾಡಿದ ಪುನೀತ್ ರಾಜ್ ಕುಮಾರ್, ಸಿಎಂ ಪರಿಹಾರ ನಿಧಿಗೆ ನೆರವು ಕೊಡಲು ಬಂದಿದ್ದೆ. ನಾನು ಫೇಸ್ ಬುಕ್ ಲೈವ್ ಬಂದು ಹೇಳಿದ ಮೇಲೆ ಸಾಕಷ್ಟು ಜನ ಪರಿಹಾರ ಕೆಲಸ, ನೆರವು ಹಸ್ತ ಚಾಚಿದ್ದಾರೆ. ಇನ್ನಷ್ಟು ಆರ್ಥಿಕ ನೆರವು ಕೊಡುವ ಯೋಜನೆ ಇದೆ. ಏನೇನೋ ಕಾರ್ಯಕ್ರಮಗಳನ್ನು ಇದಕ್ಕಾಗಿ ಹಾಕಿಕೊಂಡಿದ್ದೀವಿ. ನಾವೆಲ್ಲ ನಮ್ಮ‌ ಕೈಲಾದ ಸಹಾಯ ಮಾಡ್ತೀವಿ ಎಂದರು.

ತಮ್ಮ‌ ನಿವಾಸದಿಂದ ಹೊರಬಂದು ಸಿಎಂ ಬಿಎಸ್ ಯಡಿಯೂರಪ್ಪ ನಟ ಪುನೀತ್ ರಾಜ್ ಕುಮಾರ್ ರನ್ನು ಬೀಳ್ಕೊಟ್ಟರು.

Key words:   Actor -Punith Raj Kumar- Meet- CM BS yeddyurappa- CM Relief Fund