ನಟ ಪುನೀತ್ ರಾಜ್ ಕುಮಾರ್ ಪ್ರೇರಣೆ: ಮೈಸೂರಿನಲ್ಲಿ ನೇತ್ರದಾನ ಮಾಡುವವರ ಸಂಖ್ಯೆ ಹೆಚ್ಚಳ..

Promotion

ಮೈಸೂರು,ನವೆಂಬರ್,10,2021(www.justkannada.in): ನಟ ಪವರ್ ಸ್ಟಾರ್ ಪುನೀತ್ ರಾಜ್‍ ಕುಮಾರ್ ತಮ್ಮ ಕಣ್ಣುಗಳನ್ನ ದಾನ ಮಾಡಿ ನಾಲ್ವರ ಬಾಳಲ್ಲಿ ಬೆಳಕಾಗಿದ್ದು, ಈ ಮೂಲಕ ಸಾವಿನಲ್ಲೂ ಸಾರ್ಥಕತೆ ಮೇರೆದ ದೊಡ್ಮನೆ ಹುಡುಗನ ಹಾದಿಯನ್ನ ಹಿಡಿದ  ಯುವಕರು ಇದೀಗ ನೇತ್ರದಾನಕ್ಕೆ ಮುಂದಾಗಿದ್ದಾರೆ.

ಹೌದು, ನಟ ಪುನೀತ್ ರಾಜ್ ಕುಮಾರ್ ಅವರ ಪ್ರೇರಣೆಯಿಂದ ಯುವಕರು ಅಂದರ ಬಾಳಿಗೆ ಬೆಳಕಾಗಲು ಮುಂದಾಗಿದ್ದು, ಮೈಸೂರಿನಲ್ಲಿ ನೇತ್ರದಾನ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಕೆ.ಆರ್ ಆಸ್ಪತ್ರೆಯ ಕಣ್ಣಾಸ್ಪತ್ರೆ ವಿಭಾಗದಲ್ಲಿ ನೇತ್ರದಾನಿಗಳ ಸಂಖ್ಯೆ ಹೆಚ್ಚಳವಾಗಿದೆ. 62 ಮಂದಿಯಿಂದ ನೇತ್ರದಾನಕ್ಕೆ ನೋಂದಣಿ ಮಾಡಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಕೆ.ಆರ್.ಆಸ್ಪತ್ರೆ “ಐ ಬ್ಯಾಂಕ್” ಆಫಿಸರ್ ಡಾ.ಚಂದ್ರಕಲಾ, ನಮ್ಮ ಆಸ್ಪತ್ರೆಯಲ್ಲಿ ಪುನೀತ್ ರಾಜ್‍ ಕುಮಾರ್ ನಿಧನದ ಬಳಿಕ ನೇತ್ರದಾನಿಗಳ ಸಂಖ್ಯೆ ಹೆಚ್ಚಾಗಿದೆ. ಈಗ 62 ಮಂದಿ ಯುವಕರು ನೇತ್ರದಾನಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ. ಸಾಮಾನ್ಯವಾಗಿ ಒಂದು ತಿಂಗಳಲ್ಲಿ 10 ರಿಂದ 15 ಜನ ಮಾತ್ರ ನೋಂದಣಿ ಮಾಡಿಕೊಳ್ಳುತ್ತಿದ್ದರು. ಈಗ ಪುನೀತ್ ರಾಜ್‍ ಕುಮಾರ್ ಪ್ರೇರಣೆಯಿಂದ ನೇತ್ರದಾನಿಗಳ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ನೇತ್ರದಾನ ಮಾಡಲು ಯುವಕರು ಮುಂದೆ ಬರುತ್ತಿದ್ದಾರೆ. ಇದರೊಂದಿಗೆ ನಾವು ನೇತ್ರದಾನದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ ಎಂದು ತಿಳಿಸಿದರು.

ಹಾಗೆಯೇ  ನೇತ್ರದಾನ ಮಾಡುವ ಸಲುವಾಗಿ ವಿವಿಧ ಸಂಸ್ಥೆಗಳು 200ಕ್ಕೂ ಹೆಚ್ಚು ಪ್ರಡ್ಜ್ ಫಾರಂ ಪಡೆದಿದ್ದಾರೆ. ನೇತ್ರದಾನದ ಬಗ್ಗೆ ನಮ್ಮ ಮೈಸೂರಿಗರು ಜಾಗೃತರಾಗಿದ್ದಾರೆ. ದೇಹದೊಂದಿಗೆ ಕಣ್ಣುಗಳನ್ನ ಮಣ್ಣು ಮಾಡುವ ಬದಲು ಅಂದರ ಬಾಳಿಗೆ ಬೆಳಕಾವುದು ಶ್ರೇಷ್ಠ. ಇಂತಹ ಶ್ರೇಷ್ಠ ಕಾರ್ಯವನ್ನ ಪುನೀತ್ ರಾಜ್‍ ಕುಮಾರ್ ಮಾಡಿದ್ದಾರೆ. ಡಾ. ರಾಜ್  ಕುಮಾರ್, ಪುನೀತ್ ರಾಜ್‍ ಕುಮಾರ್ ನೇತ್ರದಾನ ಮಾಡಿ ಮಾದರಿಯಾಗಿದ್ದಾರೆ. ಅವರ ಪ್ರೇರಣೆಯಿಂದ ಯುವಕರು ನೇತ್ರದಾನ ಮಾಡುವ ಮೂಲಕ ಮತ್ತೊಬ್ಬರ ಬಾಳಿಗೆ ಬೆಳಕಾಗುತ್ತಿದ್ದಾರೆ ಎಂದು ಹೇಳಿದರು.

Key words: Actor -Punith Raj Kumar – inspiration-Increasing- number –eye-donate- Mysore

ENGLISH SUMMARY…

Inspired by actor Puneeth Rajkumar, number of people pledge to donate eyes post death
Mysuru, November 10, 2021 (www.justkannada.in): Both the eyes of late actor Puneeth Rajkumar were donated by his family members following his untimely demise. Using modern technology eye specialists have been successful in bringing sight for four people from Puneeth’s two eyes, as reported in the media earlier. Inspired by Puneeth Rajkumar, the number of people pledging to donate their eyes after their death has increased in Mysuru.
More and more youth are rushing to pledge their eyes and giving sight to the blind. According to Dr. Chandrakala, Officer, Eye Bank, K.R. Hospital number of donors has increased. About 62 persons have registered their names in the last week. “Usually, 10 to 15 people used to register names for eye donation here earlier. But after the demise of Puneeth Rajkumar, the number of donors has increased, especially among the youth. We are trying to create awareness among more people,” she said.
She also informed that more than 200 different NGOs and companies have obtained pledge forms in Mysuru. She also thanked the family members of Puneeth Rajkumar.
Keywords: Puneeth Rajkumar/ inspire/ eye donation/ Mysuru