ಕೇರಳಾದ ಕಣ್ಸನ್ನೆ ನಟಿ ಪ್ರಿಯಾ ವಾರಿಯರ್ ಕೊಡಗಿಗೆ ಭೇಟಿ: ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್…

Promotion

ಕೊಡಗು,ಆ,26,2019(www.justkannada.in):   ಕೇರಳಾದ ಕಣ್ ಸನ್ನೆ ನಟಿ ಪ್ರಿಯಾ ವಾರಿಯರ್ ಇಂದು ಕೊಡಗು ಜಿಲ್ಲೆ ಪ್ರವಾಸಿ ತಾಣಕ್ಕೆ  ಭೇಟಿ ನೀಡಿದ್ದರರು. ಈ ವೇಳೆ ಅಭಿಮಾನಿಗಳು ನಟಿ ಪ್ರಿಯಾ ವಾರಿಯರ್ ಅವರ ಜತೆ ಸೆಲ್ಫಿಗೆ ಮುಗಿಬಿದ್ದ ಪ್ರಸಂಗ ನಡೆಯಿತು.

ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಕುಶಾಲನಗರದಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣ ನಿಸರ್ಗಧಾಮಕ್ಕೆ ನಟಿ ಕಣ್ಸನ್ನೆ ಪ್ರಿಯಾ ವಾರಿಯರ್ ಭೇಟಿ ನೀಡಿದ್ದರು. ಈ ವೇಳೆ  ನಿಸರ್ಗಧಾಮದಲ್ಲಿ ನಟಿ ಪ್ರಿಯಾವಾರಿಯರ್  ಶಾಪಿಂಗ್ ಮಾಡಿದರು.

ಈ ಸಮಯದಲ್ಲಿ ಅಲ್ಲಿದ್ದ ಅಭಿಮಾನಿಗಳು ಮತ್ತು ಸ್ಥಳೀಯರು ಪ್ರಿಯಾ ವಾರಿಯರ್ ಜತೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು. ನಂತರ  ಅಭಿಮಾನಿಗಳ ಒತ್ತಾಯಕ್ಕೆ ಕಣ್ ಸನ್ನೆ ಮಾಡಿ ಪ್ರಿಯಾ ಅವರು ಎಲ್ಲರನ್ನೂ ರಂಜಿಸಿದರು. ನಿರಂತರವಾಗಿ ಸುರಿದ ಮಳೆಯಿಂದ ಪ್ರವಾಹದಿಂದ ಕೊಡಗಿನ ಪ್ರವಾಸೋದ್ಯಮ ಕಳೆಗುಂದಿದೆ.

Key words: actor-Priya Warrior- Visits –Kodagu-Fans – selfie …