ಗ್ಯಾಂಗ್ ಸ್ಟಾರ್ ಕಥೆ ಹೇಳಲು ಒಂದಾದ ಪ್ರಜ್ವಲ್ ದೇವರಾಜ್-ಪಿಸಿ ಶೇಖರ್

Promotion

ಬೆಂಗಳೂರು, ಜೂನ್ 06, 2019 (www.justkannada.in): ನಟ ಪ್ರಜ್ವಲ್ ದೇವರಾಜ್ ಹಾಗೂ ನಿರ್ದೇಶಕ ಪಿಸಿ ಶೇಖರ್ ಮತ್ತೊಮ್ಮೆ ಒಂದಾಗುತ್ತಿದ್ದಾರೆ.

ನಾಲ್ಕು ವರ್ಷದ ನಂತರ ಮತ್ತೊಮ್ಮೆ ಈ ಜೋಡಿ ಒಂದಾಗುತ್ತಿದ್ದು, ಜುಲೈ ತಿಂಗಳಲ್ಲಿ ಈ ಚಿತ್ರದ ಬಗ್ಗೆ ನಿರ್ದೇಶಕರು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ.

ಪಿ.ಸಿ ಶೇಖರ್ ಆಯಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರದ ಕುರಿತಂತೆ ಜುಲೈ 4 ರಂದು ಪ್ರಜ್ವಲ್ ದೇವರಾಜ್ ಅವರ ಜನ್ಮದಿನದಂದು ತಿಳಿಸಲಿದ್ದಾರೆ.

ವಿಶೇಷವೆಂದರೆ, ಪ್ರಜ್ವಲ್ ಈ ಚಿತ್ರದಲ್ಲಿ ಮೂರು ವಿಭಿನ್ನ ಶೇಡ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಭಾಷೆಯಲ್ಲಿ ಈ ಸಿನಿಮಾ ತಯಾರಾಗುತ್ತಿದೆ. ಗ್ಯಾಂಗ್  ಸ್ಟಾರ್ ಕಥೆ ಹೇಳಲು ತಯಾರಿ ಮಾಡಿಕೊಳ್ಳಲಾಗಿದೆ.