ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ ಪ್ರಭಾಸ್: ಮದುವೆಗೆ ಗ್ರೀನ್ ಸಿಗ್ನಲ್

Promotion

ಬೆಂಗಳೂರು, ಜೂನ್ 11, 2022 (www.justkannada.in): ಬಾಹುಬಲಿ ಹೀರೋ ಪ್ರಭಾಸ್ ಕೊನೆಗೂ ಮದುವೆಗೆ ಗ್ರೀನ್ ಸಿಗ್ನಲ್ ಕೊಟ್ಟಿರುವ ಸುದ್ದಿ ಹೊರಬಿದ್ದಿದೆ.

ಹೌದು. ಪ್ರಭಾಸ್​ ಕುಟುಂಬದ ಮೂಲಗಳ ಪ್ರಕಾರ ಪ್ರಭಾಸ್​ ಮದುವೆಗೆ ಒಪ್ಪಿಗೆ ನೀಡಿದ್ದು, ಸದ್ಯದಲ್ಲಿಯೇ ಬಾಹುಬಲಿ ಹಸೆಮಣೆ ಏರಲಿದ್ದಾರೆ.

ಈಗಾಗಲೇ ಪ್ರಭಾಸ್​ ಪೋಷಕರು ಅವರಿಗಾಗಿ ಹುಡುಗಿ ನೋಡಿದ್ದು, ಮನೆಯವರು ನೋಡಿದ ಹುಡುಗಿಗೆ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ.

ಹುಡುಗಿ ಸಿನಿಮಾ ರಂಗಕ್ಕೆ ಸಂಬಂಧ ಇಲ್ಲ ಎನ್ನಲಾಗಿದೆ. ಈ ಮೂಲಕ ಪ್ರಭಾಸ್ ಮದುವೆಯ ಬಗ್ಗೆ ಇದ್ದ ಊಹಾ ಪೋಹಾಗಳಿಗೆ ತೆರೆ ಬಿದ್ದಿದೆ.

ಈ ಮೊದಲು ಹಲವಾರು ಬೇರೆ ಬೇರೆ ನಟಿಯರ ಜೊತೆ ಪ್ರಭಾಸ್​ ಹೆಸರು ಕೇಳಿ ಬಂದಿತ್ತು. ಅವರ ಜೊತೆ ಮದುವೆ, ಇವರ ಜೊತೆ ಮದುವೆ ಎಂದೆಲ್ಲಾ ಸುದ್ದಿ ಹರಿದಾಡಿತ್ತು.