ಮದುವೆ ಆಮಂತ್ರಣ ಪತ್ರಿಕೆ ಹಂಚುವುದಲ್ಲಿ ಮಿಲನಾ-ಕೃಷ್ಣ ಬ್ಯುಸಿ !

Promotion

ಬೆಂಗಳೂರು, ಜನವರಿ 13, 2020 (www.justkannada.in): ಸ್ಟಾರ್​ ಜೋಡಿ ನಟಿ ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್​ ಕೃಷ್ಣ ತಮ್ಮ ಮದುವೆ ಆಹ್ವಾನ ಪತ್ರಿಕೆ ಹಂಚುವ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ.

ಪ್ರೇಮಿಗಳ ದಿನದಂದು ಹಸೆಮಣೆ ಏರಲು ನಿರ್ಧರಿಸಿರುವ ಈ ಪ್ರೇಮಿಗಳು ಚಿತ್ರರಂಗದ ಗಣ್ಯರು ಸೇರಿದಂತೆ ಸಂಬಂಧಿಕರಿಗೆ ಆಹ್ವಾನ ಪತ್ರಿಕೆ ಹಂಚುವುದರಲ್ಲಿ ನಿರತರಾಗಿದ್ದಾರೆ.

ಈಗಾಗಲೇ ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳಾದ ಸುದೀಪ್​, ನಮಿತಾ ರತ್ನಾಕರ್​, ಅಮೂಲ್ಯಾ ಸೇರಿದಂತೆ ಹಲವರಿಗೆ ಲಗ್ನಪತ್ರಿಕೆ ತಲುಪಿಸಿದ್ದಾರೆ.

ಲವ್​ ಮಾಕ್ಟೇಲ್-2 ಬಳಿಕ​ ಮದುವೆಯಾಗುವುದಾಗಿ ತಿಳಿಸಿದ್ದ ಈ ಜೋಡಿ ಫೆ. 14ರಂದು ಹೊಸ ಜೀವನ ಶುರು ಮಾಡಲಿದೆ.