ರತನ್ ಟಾಟಾ ಬಯೋಪಿಕ್’ಗೆ ಫೇಕ್ ನ್ಯೂಸ್’ಗೆ ಸ್ಪಷ್ಟನೆ ಕೊಟ್ಟ ನಟ ಮಾಧವನ್

Promotion

ಬೆಂಗಳೂರು,ಡಿಸೆಂಬರ್,14,2020(www.justkannada.in): ಭಾರತದ ಖ್ಯಾತ ಉದ್ಯಮಿ ರತನ್ ಟಾಟಾ ಬಯೋಪಿಕ್’ಗೆ ಸಿದ್ಧತೆ ನಡೆಯುತ್ತಿರುವ ಸುದ್ದಿ ಬಾಲಿವುಡ್ ನಿಂದ ಬಂದಿದೆ.

ಆದರೆ ರತನ್ ಟಾಟಾ ಬಯೋಪಿಕ್ ಗೆ ಯಾರು ನಿರ್ದೇಶನ ಮಾಡಲಿದ್ದಾರೆ ಎಂಬ ವಿಷಯ ಬಹಿರಂಗಗೊಂಡಿಲ್ಲ.
ಆದರೆ ವಿಶೇಷ ರತನ್ ಟಾಟಾ ಪಾತ್ರದಲ್ಲಿ ಖ್ಯಾತ ನಟ ಮಾಧವನ್ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.

ಈ ವಿಷಯವನ್ನು ಅಭಿಮಾನಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಶೇರ್ ಮಾಡಿ ನಟ ಮಾಧವನ್ ಅವರಿಗೆ ಟ್ಯಾಗ್ ಮಾಡಿದ್ದಾರೆ.

ಅಭಿಮಾನಿಯ ಪ್ರಶ್ನೆಗೆ ಉತ್ತರ ನೀಡಿರುವ ನಟ ಮಾಧವನ್, ‘ದುರದೃಷ್ಟವಶಾತ್ ಇದು ನಿಜವಲ್ಲ. ಕೆಲವು ಅಭಿಮಾನಿಗಳು ಪೋಸ್ಟರ್ ಮಾಡಿದ್ದಾರೆ. ಅಂತಹ ಯಾವುದೇ ಯೋಜನೆ ಇನ್ನು ಚರ್ಚೆಯಾಗಿಲ್ಲ ಎಂದಿದ್ದಾರೆ.