ಕೊನೆಗೂ ರಾಜಕೀಯ ಪ್ರವೇಶ ಕುರಿತು ಮೌನ ಮುರಿದ ನಟ ಕಿಚ್ಚ ಸುದೀಪ್.

Promotion

ಬೆಂಗಳೂರು,ಫೆಬ್ರವರಿ,15,2023(www.justkannada.in):  ರಾಜಕೀಯ ಪ್ರವೇಶ ಕುರಿತು ಕೊನೆಗೂ ನಟ ಕಿಚ್ಚ ಸುದೀಪ್ ಮೌನ ಮುರಿದಿದ್ದಾರೆ.

ಇತ್ತೀಚೆಗಷ್ಟೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ನಟ ಸುದೀಪ್ ಅವರನ್ನ ಭೇಟಿಯಾಗಿದ್ದರು. ಈ ವಿಚಾರ ಸಾಕಷ್ಟು ಸುದ್ದಿಯಾಗಿ ನಟ ಸುದೀಪ್ ರಾಜಕೀಯ ಪ್ರವೇಶಿಸುತ್ತಾರೆಯೇ ಎಂಬ ಕುತೂಹಲ ಉಂಟಾಗಿತ್ತು.

ಈ ಕುರಿತು ಇದೀಗ ಪ್ರತಿಕ್ರಿಯಿಸಿರುವ ನಟ ಸುದೀಪ್,  ಮನೆಗೆ ನಾಯಕರು ಬಂದಿದ್ರು. ರಾಜಕೀಯ ಮಾತುಗಳಿದ್ವು. ಆದರೆ ರಾಜಕೀಯ ಎಂಟ್ರಿ ಕೊಡುವ ಬಗ್ಗೆ ಇನ್ನು ನಿರ್ಧಾರ ತೆಗೆದುಕೊಂಡಿಲ್ಲ.  ಡಿ.ಕೆ ಶಿವಕುಮಾರ್,  ಸಚಿವ ಸುಧಾಕರ್, ಸಿಎಂ ಬಸವರಾಜ ಬೊಮ್ಮಾಯಿ ಜೊತೆ ಉತ್ತಮ ಸಂಬಂಧವಿದೆ.  ಎಲ್ಲಾ ಪಕ್ಷಗಳಲ್ಲಿ ನನಗೆ ಸ್ನೇಹಿತರು ಇದ್ದಾರೆ.  ಅಭಿಮಾನಿಗಳ ಪಕ್ಷ ಏನು ಬಯಸುತ್ತಾರೆ ಅದನ್ನ ನೋಡಬೇಕು.

ನಾನು ಭಾವನಾತ್ಮಕ ವ್ಯಕ್ತಿ. ನನಗೆ ಸರಿಯಾದ ನಿರ್ಧಾರವನ್ನು ನಾನು ತೆಗೆದುಕೊಳ್ಳುತ್ತೇನೆ. ನನಗೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಿಂದ ಆಫರ್ ಗಳಿವೆ ಎಂಬುದು ಒಂದು ನಿಜ. ಆದರೆ ಅಭಿಮಾನಿಗಳ ಪಕ್ಷ ಎಂಬ ಮತ್ತೊಂದು ಪಕ್ಷವಿದೆ. ನಾನು ಏನು ಮಾಡಬೇಕೆಂದು ಅವರು ನಿರೀಕ್ಷಿಸುತ್ತಾರೆ ಎಂಬುದನ್ನು ಕೂಡ ನಾನು ಗಮನಿಸಬೇಕಾಗಿದೆ ಎಂದು ನಟ ಕಿಚ್ಚ ಸುದೀಪ್ ತಿಳಿಸಿದ್ದಾರೆ.

Key words: Actor-Kiccha Sudeep -political -entry.