ಇಬ್ಬರು ನಿರ್ಮಾಪಕರಿಗೆ ಲೀಗಲ್ ನೋಟಿಸ್ ನೀಡಿದ ನಟ ಕಿಚ್ಚ ಸುದೀಪ್.

Promotion

ಬೆಂಗಳೂರು,ಜುಲೈ,8,2023(www.justkannada.in): ತನ್ನ ವಿರುದ್ದ ವಂಚನೆ ಆರೋಪ ಮಾಡಿದ ಇಬ್ಬರು ನಿರ್ಮಾಪಕರಿಗೆ ಬೇಷರತ್ ಕ್ಷಮೆಯಾಚಿಸುವಂತೆ ನಟ ಕಿಚ್ಚ ಸುದೀಪ್ ಲೀಗಲ್ ನೋಟಿಸ್ ನೀಡಿದ್ದಾರೆ.

ನಿರ್ಮಾಪಕರಾದ ಎಂ.ಎನ್ ಕುಮಾರ್,  ಎಂ.ಎನ್ ಸುರೇಶ್ ಗೆ  ನಟ ಕಿಚ್ಚ ಸುದೀಪ್ ಅವರು ಹಿರಿಯ ವಕೀಲ ಸಿವಿ ನಾಗೇಶ್ ಮೂಲಕ ನೋಟಿಸ್ ನೀಡಿದ್ದಾರೆ ಎನ್ನಲಾಗಿದೆ. ಹಣ ಪಡೆದು ಕಾಲ್ ಶೀಟ್ ಕೊಡುತ್ತಿಲ್ಲ ಎಂದು ಇಬ್ಬರು ನಿರ್ಮಾಪಕರು ಆರೋಪಿಸಿದ್ದರು.

ಈ ಹಿನ್ನೆಲೆಯಲ್ಲಿ ಲೀಗಲ್ ನೋಟಿಸ್ ನೀಡಿರುವ ನಟ ಕಿಚ್ಚ ಸುದೀಪ್, ಸುಳ್ಳು ಹೇಳಿ ನನ್ನ ತೇಜೋವಧೆ ಮಾಡಿದ್ದೀರಿ. ನನ್ನ ಮೇಲಿನ ಎಲ್ಲಾ ಆರೋಪ ಸಾಬೀತು ಪಡಿಸಿ.  ಇಲ್ಲವಾದರೆ  ಬೇಷರತ್ ಕ್ಷಮೆಯಾಚಿಸಿ ಜೊತೆಗೆ 10 ಕೋಟಿ ರೂ.  ಮಾನನಷ್ಟ ದಂಡ ಕಟ್ಟಿ ಎಂದು ನೋಟಿಸ್ ನಲ್ಲಿ ಉಲ್ಲೇಖ ಮಾಡಿದ್ದಾರೆ ಎನ್ನಲಾಗಿದೆ.

Key words: Actor- Kiccha Sudeep – legal notice – two- producers.