ಕುತೂಹಲ ಮೂಡಿಸಿದ ನಟ ಕಿಚ್ಚ ಸುದೀಪ್  ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಭೇಟಿ.

Promotion

ಬೆಂಗಳೂರು,ಫೆಬ್ರವರಿ,3,2023(www.justkannada.in): ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್  ನಿನ್ನೆ ರಾತ್ರಿ ನಟ ಕಿಚ್ಚ ಸುದೀಪ್  ಅವರನ್ನ ಭೇಟಿಯಾಗಿ ಅಚ್ಚರಿ ಮೂಡಿಸಿದ್ದಾರೆ.

ಈ ನಡುವೆ  ಇತ್ತೀಚೆಗೆ ನಟಿ ರಮ್ಯಾ ಮೂಲಕ ಸುದೀಪ್ ಅವರನ್ನು ಕಾಂಗ್ರೆಸ್ ಗೆ ಕರೆತರುವ ಪ್ರಯತ್ನ ನಡೆದಿದೆ ಎನ್ನುವ ಸುದ್ದಿ ಹರಡಿತ್ತು. ಈ ಬೆನ್ನಲ್ಲೇ  ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನಟ ಸುದೀಪ್ ಮನೆಗೆ  ಭೇಟಿ ನೀಡಿರುವುದು ಮತ್ತಷ್ಟು ಕುತೂಹಲವನ್ನುಂಟು ಮಾಡಿದೆ.

ಸಿನಿಮಾ ಸ್ಕ್ರೀನ್ ಉದ್ಘಾಟನೆ ನೆಪದಲ್ಲಿ ಡಿಕೆ ಶಿವಕುಮಾರ್ ನಟ ಕಿಚ್ಚ ಸುದೀಪ್ ಅವರನ್ನ ಭೇಟಿಯಾಗಿದ್ದು, ರಾತ್ರಿ ಜೊತೆಯಲ್ಲೇ ಡಿನ್ನರ್ ಮಾಡಿದ್ದಾರೆ. ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಗಳಿಗೆ ಸ್ಟಾರ್ ಪ್ರಚಾರಕರಾಗಿ ಬರುವಂತೆ ಸುದೀಪ್ ಅವರಿಗೆ ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ.

Key words: Actor -Kiccha -Sudeep – KPCC –President- DK Shivakumar -met.