ನಿರ್ಮಾಪಕ ಕುಮಾರ್ ವಿರುದ್ದ ಮಾನನಷ್ಟ ಮೊಕದ್ಧಮೆ ದಾಖಲಿಸಿದ ನಟ ಕಿಚ್ಚ ಸುದೀಪ್: ಆ.17 ರಂದು ವಿಚಾರಣೆ.

Promotion

ಬೆಂಗಳೂರು,ಜುಲೈ,15,2023(www.justkannada.in): ತಮ್ಮ ವಿರುದ್ಧ ಹಣ ಪಡೆದಿದ್ದರೂ ಕಾಲ್ ಶೀಟ್ ನೀಡದೆ ಸತಾಯಿಸಿದ ಆರೋಪ ಮಾಡಿದ್ದ ನಿರ್ಮಾಪಕ ಎಂ ಎನ್‌ ಕುಮಾರ್‌ ವಿರುದ್ಧ ನಟ ಕಿಚ್ಚ ಸುದೀಪ್ ಮಾನನಷ್ಟ ಪ್ರಕರಣ ದಾಖಲಿಸಿದ್ದಾರೆ.

ಇಂದು ಬೆಂಗಳೂರಿನ ಜೆಎಂಎಫ್ ಸಿ ಕೋರ್ಟ್ ಗೆ ಆಗಮಿಸಿ ನಟ ಕಿಚ್ಚ ಸುದೀಪ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದು ಪ್ರಕರಣ ವಿಚಾರಣೆಗೆ ಸ್ವೀಕರಿಸಿದ ಕೋರ್ಟ್ ಆಗಸ್ಟ್ 17ಕ್ಕೆ ವಿಚಾರಣೆ ಮುಂದೂಡಿದೆ.

ಈ ಬಗ್ಗೆ ಕೋರ್ಟ್ ಆವರಣದಲ್ಲಿ ಮಾತನಾಡಿದ ನಟ ಕಿಚ್ಚ ಸುದೀಪ್, ನನ್ನ ವಿರುದ್ದ ಮಾಡಿರುವ ಆರೋಪಗಳಿಗೆ ಉತ್ತರ ನೀಡುವಂತೆ ನೋಟಿಸ್ ಕೊಟ್ಟಿದ್ದೆ. ಅವರು ಉತ್ತರ ನೀಡದಿರುವುದರಿಂದ ಕೋರ್ಟ್ ಗೆ ಬಂದಿದ್ದೇನೆ. ಕುಮಾರ್ ಆರೋಪಗಳೀಗೆ ಉತ್ತರ ನೀಡಬೇಕು ಎಂದರು.

ಬಾಯಿ ಇದೆ ಅಂತಾ ಮಾತನಾಡಬಾರದು ಕಾನೂನು ವ್ಯಾಪ್ತಿಯಲ್ಲಿ ಎಲ್ಲದಕ್ಕೂ ಉತ್ತರ ಕೊಡಬೇಕಿದೆ.  ಫಿಲ್ಮಂ ಛೇಂಬರ್ ನನಗೆ ತಾಯಿ ಸಮಾನ. ಕಾನೂನು ವ್ಯಾಪ್ತಿಯಲ್ಲಿ ಸಮಸ್ಯೆ ಬಗೆಹರಿಯಲಿ ಎಂದು ಕೋರ್ಟ್ ಗೆ ಬಂದಿದ್ದೇನೆ ಎಂದರು.

Key words: Actor-Kiccha Sudeep – filed – defamation- case- against- producer- Kumar.