ನಟ ಜಗ್ಗೇಶ್ ಗೆ ‘ಡಿ ಬಾಸ್’  ಅಭಿಮಾನಿಗಳಿಂದ ಮುತ್ತಿಗೆ: ಕ್ಷಮೆ ಕೋರಲು ಆಗ್ರಹ…

Promotion

ಮೈಸೂರು,ಫೆಬ್ರವರಿ,22,2021(www.justkananda.in):  ನಟ ದರ್ಶನ್ ಅಭಿಮಾನಿಗಳನ್ನ ನಿಂದಿಸಿದ್ದಾರೆಂದು ಆರೋಪ ಹಿನ್ನಲೆ ನಟ ಜಗ್ಗೇಶ್ ಗೆ ನಟ ದರ್ಶನ್ ಅಭಿಮಾನಿಗಳು ಮುತ್ತಿಗೆ ಹಾಕಿ ತರಾಟೆ ತೆಗೆದುಕೊಂಡ ಘಟನೆ ನಡೆದಿದೆ.

ನಮ್ಮತ್ರ  ಇರೋರೆಲ್ಲಾ ಹಾರ್ಡ್ ವರ್ಕ್ ಮಾಡೋರು. ದರ್ಶನ್ ತರ ತಲೆ ಮಾಂಸ ಕಳಿಸಿ, ನೂರು ಕುರಿ ಕಳಿಸಿ ಅನ್ನೋರು ಯಾರು ಇಲ್ಲ ಎಂದು ಹೇಳಿಕೆ ನೀಡಿದ್ದರು ಎನ್ನಲಾಗಿದೆ.  ಈ ಬಗ್ಗೆ ನಟ ದರ್ಶನ್ ಫ್ಯಾನ್ಸ್ ಗರಂ ಆಗಿದ್ದು ಇಂದು ಮೈಸೂರು ಜಿಲ್ಲೆ ಬನ್ನೂರಿನ ಅತ್ತಳ್ಳಿ ಬಳಿ ಶೂಟಿಂಗ್ ಸೆಟ್ ಗೆ ಮುತ್ತಿಗೆ ಹಾಕಿ ನಟ ಜಗ್ಗೇಶ್ ಅವರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಸಿನಿಮಾವೊಂದರ ಶೂಟಿಂಗ್‌ ನಲ್ಲಿ ಇದ್ದ ಜಗ್ಗೇಶ್‌ ಅವರನ್ನು ಭೇಟಿಯಾದ ದರ್ಶನ್‌ ಅವರ ಅಭಿಮಾನಿಗಳು ಜಗ್ಗೇಶ್‌ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಜಗ್ಗೇಶ್‌ರನ್ನ ತರಾಟೆಗೆ ತೆಗೆದುಕೊಂಡಿರುವ ವಿಡಿಯೋ ವೈರಲ್ ಆಗಿದೆ. ದರ್ಶನ್ ಅಭಿಮಾನಿ ನಾಗರಾಜ್ ಸೇರಿದಂತೆ ಹಲವರು ನಟ ಜಗ್ಗೇಶ್ ಗೆ ಕ್ಷಮೆಯಾಚಿಸುವಂತೆ ಒತ್ತಾಯಿಸಿದರು.

ಈ ಕುರಿತು ಪ್ರತಿಕ್ರಿಯಿಸಿರುವ ನಟ ಜಗ್ಗೇಶ್, ನಾನು ಯಾರನ್ನೂ ನಿಂದಿಸಿಲ್ಲ. ಯಾರೋ ನನ್ನ ಹಾಗೆಯೇ ಮಾತನಾಡಿದ್ದಾರೆ. ನನ್ನ ಮತ್ತು ದರ್ಶನ್ ನಡುವೆ ತಂದಾಕುವ ಕೆಲಸ ಮಾಡಿದ್ದಾರೆ. ನಾನು ಯಾರನ್ನೂ ಬೈದಿಲ್ಲ, ನಿಂದನೆ ಮಾಡಿಲ್ಲ. ನನ್ನ ವಾಯ್ಸ್‌ ನಲ್ಲಿ ಮಾತನಾಡಿದ್ದಾರೆಂದು ದರ್ಶನ್ ಅಭಿಮಾನಿಗಳಿಗೆ ಸಮಜಾಯಿಷಿ ಕೊಟ್ಟರು.

 Actor- Jaggesh – apologize - actor –darshan-fans.
ಕೃಪೆ-internet

ಆದರೆ ಇದಕ್ಕೆ ಪಟ್ಟು ಬಿಡದ ನಟ ದರ್ಶನ್ ಫ್ಯಾನ್ಸ್ ನೀವೇ ನಿಂದನೆ ಮಾಡಿರೋದು ಎಂದು ಕ್ಷಮೆಯಾಚಿಸುವಂತೆ ಒತ್ತಾಯಿಸಿದರು.

Key words: Actor- Jaggesh – apologize – actor –darshan-fans.