ಈ ವಾರ ಕಾಮಿಡಿ ಕಿಲಾಡಿಗಳನ್ನು ಜಡ್ಜ್ ಮಾಡಲಿದ್ದಾರೆ ಗೋಲ್ಡನ್ ಸ್ಟಾರ್ !

Promotion

ಬೆಂಗಳೂರು, ಸೆಪ್ಟೆಂಬರ್ 18, 2019 (www.justkannada.in): ಜೀ ಕನ್ನಡದ ಕಾಮಿಡಿ ರಿಯಾಲಿಟಿ ಶೋ ಸೀಸನ್ 3ರಲ್ಲಿ ಈ ಬಾರಿ ಗೋಲ್ಡನ್ ಸ್ಟಾರ್ ಗಣೇಶ್ ಪಾಲ್ಗೊಳ್ಳುತ್ತಿದ್ದಾರೆ.

ಹೌದು. ಈ ವಾರದ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಲ್ಲಿ ರಕ್ಷಿತಾ ಪಾಲ್ಗೊಳ್ಳುತ್ತಿಲ್ಲ. ಅವರು ಅನಾರೋಗ್ಯ ಕಾರಣದಿಂದ ಹಾಜರಾಗುತ್ತಿಲ್ಲ. ಇವರ ಬದಲಿಗೆ ಕಾಮಿಡಿ ಕಿಲಾಡಿಗಳು ತೀರ್ಪುಗಾರರಾಗಿ ಗೋಲ್ಡನ್​ ಸ್ಟಾರ್​ ಗಣೇಶ್ ಬರಲಿದ್ದಾರೆ.

ಕಾಮಿಡಿ ಕಿಲಾಡಿಗಳಿಗೆ ಗಣೇಶ್​ ಬರುತ್ತಿರುವ ವಿಷಯವನ್ನು ನವರಸನಾಯಕ ಜಗ್ಗೇಶ್ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.