ರವಿ ಬೆಳಗೆರೆ ವಿರುದ್ಧ ಕಿಡಿಕಾರಿದ ದುನಿಯಾ ವಿಜಯ್ !

Promotion

ಬೆಂಗಳೂರು, ಆಗಸ್ಟ್ 24, 2019 (www.justkannada.in): ತಮ್ಮ ಹಾಗೂ ನಟ ದರ್ಶನ್ ಖಾಸಗಿ ಬದುಕಿನ ಬಗ್ಗೆ ಯೂ ಟ್ಯೂಬ್ ಚಾನೆಲ್ ನಲ್ಲಿ ಮಾತನಾಡಿರುವ ಪತ್ರಕರ್ತ, ಲೇಖಕ ರವಿ ಬೆಳಗರೆ ವಿರುದ್ಧ ನಟ ದುನಿಯಾ ವಿಜಯ್ ಕಿಡಿ ಕಾರಿದ್ದಾರೆ.

ನಟ ಧನಂಜಯ್ ಅಭಿನಯದ ಬಡವ ರಾಸ್ಕಲ್ ಸಿನಿಮಾ ಮುಹೂರ್ತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದುನಿಯಾ ವಿಜಯ್ ಗೆ ಪತ್ರಕರ್ತರು ರವಿಬೆಳಗರೆ ಮಾತನಾಡಿರುವ ವಿಚಾರದ ಬಗ್ಗೆ ಪ್ರಸ್ತಾಪ ಮಾಡಿದ್ದರು.

ನಟ ದರ್ಶನ್ ಹೆಂಡತಿಗೆ ಹೊಡೆದ ವಿಚಾರ ಮತ್ತು ದುನಿಯಾ ವಿಜಯ್ ಇಬ್ಬರು ಹೆಂಡತಿಯರನ್ನು ಹೊಂದಿರುವ ವಿಚಾರದ ಕುರಿತಂತೆ ರವಿಬೆಳಗರೆ ಟೀಕೆ ಮಾಡಿದ್ದರು.

ಈ ಬಗ್ಗೆ ಪರ್ತಕರ್ತರು ಕೇಳಿದಾಗ ದುನಿಯಾ ವಿಜಯ್ ‘ರವಿಬೆಳಗರೆಗೇ ಇಬ್ಬರು ಹೆಂಡ್ತೀರು, ನಾಲ್ಕು ಮಕ್ಳು. ಪ್ರಜ್ಞೆ ಇಲ್ಲ ಅವನಿಗೆ. ಒಮ್ಮೆ ಪುಲ್ವಾಮಾ ಅಂತಾನೆ, ಒಮ್ಮೆ ಯಾರ್ದೋ ಹೆಂಡ್ತಿ ಗಲಾಟೆ ಅಂತಾನೆ. ಅವನಿಗೇನಾದ್ರೂ ಪ್ರಾಬ್ಲಂ ಇದ್ಯಾ? ಎಂದು ಕಿಡಿಕಾರಿದ್ದಾರೆ.