ಉತ್ತರಾಖಂಡ ಕಾಡಿನಲ್ಲಿ ದರ್ಶನ್ ಸುತ್ತಾಟ

Promotion

ಬೆಂಗಳೂರು, ಜನವರಿ 29, 2019 (www.justkannada.in): ಕೆಲವು ತಿಂಗಳ ಹಿಂದಷ್ಟೇ ಕೀನ್ಯಾ ಪ್ರವಾಸ ಮಾಡಿದ್ದ ದರ್ಶನ್​ ಈಗ ಉತ್ತರಾಖಂಡ ಪ್ರವಾಸದಲ್ಲಿದ್ದಾರೆ.

ಕರ್ನಾಟಕ ಅರಣ್ಯ ಇಲಾಖೆಯ ರಾಯಭಾರಿಯಾಗಿರುವ ಬಿಡುವು ಸಿಕ್ಕಾಗಲೆಲ್ಲಾ ಹೆಗಲಿಗೆ ಕ್ಯಾಮರಾ ಏರಿಸಿಕೊಂಡು ಕಾಡಿನ ಕಡೆಗೆ ತೆರಳುತ್ತಾರೆ. ಈ ಬಾರಿ ಗಣರಾಜ್ಯೋತ್ಸವಕ್ಕೆ ಉತ್ತರಾಖಂಡದಿಂದಲೇ ಶುಭಾಶಯ ಕೋರಿದ್ದರು ದರ್ಶನ್.

ಗೆಳೆಯರು ಮತ್ತು ವೈಲ್ಡ್​​ಲೈಫ್​​ ಫೋಟೋಗ್ರಫರ್​ಗಳ ತಂಡದೊಂದಿಗೆ ಉತ್ತರಾಖಂಡಕ್ಕೆ ತೆರಳಿರುವ ದರ್ಶನ್ ​ಅಲ್ಲಿನ ಅರಣ್ಯ ಪ್ರದೇಶದಲ್ಲಿ ವನ್ಯಜೀವಿಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.

ದೊಡ್ಡದಾದ ಕ್ಯಾಮೆರಾವನ್ನು ಹೊತ್ತುಕೊಂಡು ಉತ್ತರಾಖಂಡದ ಸತ್ತಲ್ ಕಾಡಿನಲ್ಲಿ ಸುತ್ತಾಡುತ್ತಿರುವ ಡಿ ಬಾಸ್​ ಫೋಟೋಗಳನ್ನು ಅವರ ಅಭಿಮಾನಿಗಳು ಶೇರ್ ಮಾಡಿಕೊಂಡಿದ್ದರು.