ನಿರ್ಮಾಪಕ ಉಮಾಪತಿ ವಿರುದ್ಧ ನೇರ ಆರೋಪ ಮಾಡಿದ ಆರೋಪಿ ಅರುಣ್ ಕುಮಾರಿ.

Promotion

ಬೆಂಗಳೂರು,ಜುಲೈ,13,2021(www.justkannada.in): ನಟ ದರ್ಶನ್  ಬಳಿ ಕರೆದುಕೊಂಡು ಹೋಗಿದ್ದು ಉಮಾಪತಿಯೇ.  ನಟ ದರ್ಶನ್ ಮತ್ತು ಹರ್ಷಾ ಅವರ  ದೂರ ಮಾಡೋಕೆ ನನ್ನನ್ನ ಬಳಸಿಕೊಂಡಿದ್ದಾರೆ. ದರ್ಶನ್ ಮತ್ತು ಹರ್ಷಾ ಅವರು ದೂರವಾದ್ರೆ ಸಾಕು ಅಂತಿದ್ರು ಎಂದು ನಿರ್ಮಾಪಕ ಉಮಾಪತಿ ವಿರುದ್ಧ ಆರೋಪಿ ಅರುಣ ಕುಮಾರಿ ಗಂಭೀರ ಆರೋಪ ಮಾಡಿದ್ದಾರೆ.jk

ನಟ ದರ್ಶನ್​ ಹೆಸರಲ್ಲಿ ವಂಚನೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಆರೋಪಿ ಅರುಣ್ ಕುಮಾರಿ, ಇಷ್ಟೆಲ್ಲಾ ಆಗೋಕೆ ನಿರ್ಮಾಪಕ ಉಮಾಪತಿಯೇ ನೇರ ಕಾರಣ. ಈ ಪ್ರಕರಣದಲ್ಲಿ ನಟ ದರ್ಶನ್​ ನಿಜಕ್ಕೂ ಅಮಾಯಕ. ದರ್ಶನ್ ಫಾರಂ ಗೌಸ್ ಎರಡು ಭಾರಿ ಹೋಗಿದ್ಧೆ. ನಾನೇನು ಕಳ್ಳತನ ಮಾಡಿಲ್ಲ ನಾನು ಲೋನ್ ಗೆ ಅಪ್ರೋಚ್ ಮಾಡಿದ್ದೆ ಅಷ್ಟೆ. ಲೋನ್ ಅಪ್ಲೆಗ ಲೋನ್ ಅಪ್ರೋಚ್ ಗೂ ತುಂಬಾ ವ್ಯತ್ಯಾಸ ಇದೆ. ಉಮಾಪತಿಯೇ ಹರ್ಷ ಜತೆ ಚರ್ಚಿಸಬಹುದಿತ್ತು.

ಸುದ್ದಿಗೋಷ್ಠಿಯಲ್ಲಿ ಉಮಾಪತಿ ನನ್ನ ಪರಿಚಯ ಇರಲಿಲ್ಲ ಎಂದೆಲ್ಲ ಹೇಳಿದ್ದಾರೆ. ಆದರೆ ನನಗೆ ಅವರು ಮಾರ್ಚ್ 30ರಿಂದಲೇ ಪರಿಚಯವಾಗಿದ್ದರು. ದರ್ಶನ್ ರನ್ನ ಭೇಟಿ ಮಾಡಿಸಿದ್ದು ಅವರೇ. ದೊಡ್ಡವರು ಹೇಗೆ ಬೇಕಾದರೂ ತಿರುಗಿ ಬಿಡ್ತಾರೋ.  ನಾನು ತುಂಬಾ ಡಿಪ್ರೆಷನ್ ಗೆ ಹೋಗಿದ್ದೇನೆ. ನನ್ನನ್ನ ಯಾಕೆ ಮಧ್ಯ ತರುತ್ತೀರಿ.  ನನ್ನ ಲೈ ಫ್ ಹಾಳಾದ್ರೆ ನಟ ದರ್ಶನ್ ಉಮಾಪತಿ ಬರಲ್ಲ. ಕಷ್ಟವೋ ಸುಖವೂ ಬದುಕುತ್ತೇನೆ. ಬದುಕಲು ಬಿಡಿ. ನಮ್ಮ ತಂದೆ ತಾಯಿ ತುಂಬಾ ನೋಂದಿದ್ದಾರೆ. ಆತ್ಮಹತ್ಯೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿ ಅರುಣ ಕುಮಾರಿ ಅಳಲು ತೋಡಿಕೊಂಡಿದ್ದಾರೆ.

ಉಮಾಪತಿ ಹಾಗೂ ಹರ್ಷ ನಡುವೆ ಸಮಸ್ಯೆ ಇದ್ದರೆ ಅವರೇ ಬಗೆಹರಿಸಿಕೊಳ್ಳಬಹುದಿತ್ತು. ಉಮಾಪತಿ ನೇರವಾಗಿ ದರ್ಶನ್​​ರಿಗೆ ಹರ್ಷ ಬಗ್ಗೆ ಹೇಳಬಹುದಿತ್ತು. ಈ ರೀತಿ ನನ್ನನ್ನ ಏಕೆ ಮಧ್ಯಕ್ಕೆ ಸಿಲುಕಿಸುತ್ತಿದ್ದಾರೆ ಅನ್ನೋದೇ ಗೊತ್ತಾಗುತ್ತಿಲ್ಲ. ಕುಮಾರ್​ ನನ್ನ ಪತಿ ಎಂದು ಹೇಳಿಕೊಳ್ಳೋಕೆ ನನಗೆ ನಾಚಿಗೆ ಆಗುತ್ತದೆ. ಆತನಿಂದ ನನ್ನ ಕೆಲ ಫೋಟೋಗಳನ್ನ ಪಡೆದುಕೊಂಡಿದ್ದಾರೆ. ಈ ಪ್ರಕರಣದಲ್ಲಿ ಉಮಾಪತಿಗೆ ಲಾಭ ಏನಿದೆ ಅಥವಾ ನಷ್ಟವಿದೆಯಾ ನನಗೆ ಗೊತ್ತಿಲ್ಲ. ನನಗಂತೂ ಇದರಿಂದ ನಯಾಪೈಸೆ ಲಾಭವಿಲ್ಲ. ಆದರೆ ನನ್ನನ್ನ ಇದರಲ್ಲಿ ಉಮಾಪತಿ ಎಳೆಯಬಾರದಿತ್ತು ಎಂದು ಬೇಸರ ಹೊರಹಾಕಿದ್ದಾರೆ.

Key words: actor-Darshan- Arun Kumari -accused –against- producer- Umapati