ಪ್ರಾಣಿಗಳ ಬಗ್ಗೆ ಕಾಳಜಿ ಮುಂದುವರೆಸಿದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್…

Promotion

ಮೈಸೂರು,ಜು,29,2019(www.justkannada.in):  ಪ್ರಾಣಿಪ್ರಿಯ ಡಿ.ಬಾಸ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಾಣಿಗಳ ಮೇಲೆ ತಾವು ಇಟ್ಟಿರುವ ಕಾಳಜಿಯನ್ನ ಮುಂದುವರೆಸಿದ್ದಾರೆ.

ಈಗಾಗಲೇ ಮೃಗಾಲಯದಲ್ಲಿ ಪ್ರಾಣಿಗಳನ್ನ ದತ್ತು ಪಡೆದಿರುವ ನಟ ದರ್ಶನ್,  ಪ್ರಾಣಿದತ್ತು ನವೀಕರಣ ಮಾಡಿಕೊಂಡಿದ್ದಾರೆ. ವಿಶ್ವ ಹುಲಿ‌ ದಿನದಂದೇ  ಪ್ರಾಣಿದತ್ತು ನವೀಕರಣ ಮಾಡಿ ಪ್ರಾಣಿಗಳ ಮೇಲಿನ ಪ್ರೀತಿಯನ್ನ ಮತ್ತುಷ್ಟು ಹೆಚ್ಚಿಸಿಕೊಂಡಿದ್ದಾರೆ.

ಸುಮಾರು 2.95 ಲಕ್ಷ ರೂ ಚೆಕ್ ನೀಡಿ  ನಟ ದರ್ಶನ್ ಒಂದು ಗಂಡು ಹುಲಿ ಸೇರಿ ಒಟ್ಟು ನಾಲ್ಕು ಪ್ರಾಣಿಗಳ ದತ್ತು ನವೀಕರಣ ಮಾಡಿಕೊಂಡಿಕೊಂಡಿದ್ದಾರೆ. ಹುಲಿ, ಎರಡು ಅನಕೊಂಡ, ಹಾಗೂ ಆನೆಯನ್ನ ದತ್ತು ಪಡೆದಿದ್ದರು. ಇನ್ನು ದರ್ಶನ್ ನವೀಕರಣದ ಬಗ್ಗೆ  ಮೃಗಾಲಯದ ನಿರ್ದೇಶಕ ಅಜಿತ್ ಕುಲಕರ್ಣಿ ಸ್ಪಷ್ಟಪಡಿಸಿದ್ದಾರೆ.

Key words: actor -challenging star- Darshan -continues –care- about- animals.