ಚುನಾವಣೆ ವೇಳೆ ಯಾರೇ ಅಕ್ರಮ ನಡೆಸಿದ್ರೂ ಕ್ರಮ ತೆಗದುಕೊಳ್ಳಬೇಕು- ಮಾಜಿ ಸಿಎಂ ಸಿದ‍್ಧರಾಮಯ್ಯ.

Promotion

ಮೈಸೂರು,ಮಾರ್ಚ್,29,2023(www.justkannada.in):  ಇಂದು ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಲಿದ್ದು ಎಲೆಕ್ಷನ್ ವೇಳೆ ನಡೆಯುವ ಅಕ್ರಮಗಳನ್ನ ತಡೆಯುವಂತೆ ಮಾಜಿ ಸಿಎಂ ಸಿದ್ಧರಾಮಯ್ಯ ಆಗ್ರಹಿಸಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ,  ಇಂಧು ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ನಿಗದಿಯಾಗಲಿದೆ ಚುನಾವಣೆ ವೇಳೆ ನಡೆಯುವ ಅಕ್ರಮಗಳನ್ನ ತಡೆಯಬೇಕು. ಕಾಂಗ್ರೆಸ್ ಚುನಾವಣೆಗೆ ಸಿದ‍್ಧವಾಗಿದೆ. ಪಾರದರ್ಶಕವಾಗಿ ರಾಜ್ಯದಲ್ಲಿಚುನಾವಣೆ ನಡೆಯಬೇಕು.  ಆಡಳಿತ ಪಕ್ಷ ಸೇರಿ ಯಾರೇ ಅಕ್ರಮ ನಡೆಸಿದ್ರೂ ಕ್ರಮಕೈಗೋಳ್ಳಬೇಕು.  ಅಕ್ರಮಗಳನ್ನ ತಡೆಯುವ ಕೆಲಸ ಆಗಬೇಕು ಎಂದು ಹೇಳಿದರು.

ಇದು ನನ್ನ ಕೊನೆಯ ಚುನಾವಣೆ ನನ್ನ ಹುಟ್ಟೂರು ಸಿದ್ದರಾಮನಹುಂಡಿ ವರುಣಾ ಕ್ಷೇತ್ರಕ್ಕೆ ಬರುತ್ತೆ ಹಾಗಾಗಿ ನಾನು ವರುಣಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಸಿದ್ಧರಾಮಯ್ಯ ಹೇಳಿದರು.

Key words: Action -taken -against – illegal activities -during –elections- Former CM -Siddharamaiah.