ಮಹಿಳಾ ಪೊಲೀಸ್ ಜೊತೆ ಅನುಚಿತ ವರ್ತನೆ ಆರೋಪ: ರೈತ ಸಂಘದ ರಾಜ್ಯ ಉಪಾಧ್ಯಕ್ಷ ಬಂಧನ..

Promotion

ಮೈಸೂರು,ಮೇ,16,2019(www.justkannada.in):  ಮಹಿಳಾ ಪೊಲೀಸ್ ಜೊತೆ ಅನುಚಿತ ವರ್ತನೆ ಆರೋಪದ ಮೇಲೆ ರೈತ ಸಂಘದ ರಾಜ್ಯ ಉಪಾಧ್ಯಕ್ಷರನ್ನ ಪೊಲೀಸರು ಬಂಧಿಸಿದ್ದಾರೆ.

ರೈತ ಸಂಘದ ಉಪಾಧ್ಯಕ್ಷ ಲೋಕೇಶ್ ರಾಜೇ ಅರಸ್ ಬಂಧಿತ ರೈತ ಮುಖಂಡ. ಮೈಸೂರು ಜಿಲ್ಲೆ ಪಿರಿಯಾಪಟ್ಟಣದ ಬೆಟ್ಟದಪುರ ಠಾಣಾ ಪೊಲೀಸರು ರೈತಮುಖಂಡ ಲೋಕೇಶ್ ರನ್ನ ಬಂಧಿಸಿದ್ದಾರೆ.  ಕೇಸಿನ ಬಗ್ಗೆ ಠಾಣೆಗೆ ಹೋದಾಗ ಮಹಿಳಾ ಪೇದೆ ಹಾಗೂ ಲೋಕೇಶ್ ನಡುವೆ ಮಾತಿಗೆ ಮಾತು ಬೆಳೆದಿತ್ತು. ಈ ಬಗ್ಗೆ ಮಹಿಳಾ ಪೇದೆ ದೂರು ನೀಡಿದ ಹಿನ್ನೆಲೆ ರಾತ್ರೋರಾತ್ರಿ ಲೊಕೇಶ್ ರಾಜೇ ಅರಸ್ ರನ್ನ  ಬಂಧಿಸಿ  ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ.

ರೈತನ ಮುಖಂಡನ ಬಂಧನ ಖಂಡಿಸಿ ರೈತ ಸಂಘದ ಕಾರ್ಯಕರ್ತರು  ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಪೊಲೀಸರ ಕ್ರಮ ಖಂಡಿಸಿ ಪೊಲೀಸ್ ಠಾಣೆ ಮುಂದೆ ಅಹೋರಾತ್ರಿ ಧರಣಿ ನಡೆಸಿದರು. ಪ್ರತಿಭಟನೆಯಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಸೇರಿ ಹಲವರು ಭಾಗಿಯಾಗಿದ್ದರು.  ಸ್ಥಳಕ್ಕೆ ಅಡಿಷನಲ್ ಎಸ್ಪಿ ಸೇರಿ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದರು. ಈ ನಡುವೆ ಪಿಎಸ್ ಐ ಬಾಲು ಹಾಗೂ ಮಹಿಳಾ ಪೇದೆ ವಿರುದ್ದವೂ ರೈತ ಮುಖಂಡರಿಂದ ದೂರು ದಾಖಲಾಗಿದೆ.

Key words: Accused – – women- police- Arrest -Vice President – Farmers Association