ಪತ್ನಿಯಿಂದ ಕಿರುಕುಳ ಆರೋಪ: ಪತಿ ಆತ್ಮಹತ್ಯೆಗೆ ಶರಣು…

Promotion

ಮೈಸೂರು,ಜೂ,25,2019(www.justkannada.in): ಪತ್ನಿಯಿಂದ ಕಿರುಕುಳದಿಂದ ಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆ ಕೆ.ಆರ್ ನಗರ ತಾಲ್ಲೂಕಿನಲ್ಲಿ ನಡೆದಿದೆ.

ಕೆ.ಆರ್. ನಗರ ತಾಲ್ಲೂಕಿನ ಹೊಸ ಅಗ್ರಹಾರ ಗ್ರಾಮದ  ಗೋಪಿಕೃಷ್ಣ (35) ಮೃತಪಟ್ಟ ಪತಿ. ಗೋಪಿಕೃಷ್ಣ  ರೈಲ್ವೆ ಪೊಲೀಸ್ ಇಲಾಖೆಯ ಸಿಬ್ಬಂದಿಯಾಗಿದ್ದು, ಪ್ರಸ್ತುತ ಮಂಡ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆತ್ಮಗತ್ಯೆಗೂ ಮುನ್ನಾ ಪತ್ನಿಯನ್ನು ಕರೆದುಕೊಂಡು ಬರುತ್ತೇನೆಂದು ಮನೆಗೆ  ಹೇಳಿ ಪತ್ನಿ ಅಕ್ಷತಾಳ ತವರು ಮನೆ ಕೆ.ಆರ್.ನಗರ ತಾಲೂಕಿನ‌ ಹಳೆಯೂರು ಗ್ರಾಮಕ್ಕೆ ಹೋಗಿದ್ದರು ಎನ್ನಲಾಗಿದೆ.

ಈ ನಡುವೆ ಪತಿ ಗೋಪಿಕೃಷ್ಣ ಹಾಗೂ  ಪತ್ನಿ ಅಕ್ಷತಾ ನಡುವೆ ಆಗಾಗ್ಗೆ ಕೌಟುಂಬಿಕ ಕಲಹ ನಡೆಯುತ್ತಿತ್ತು. ಸೊಸೆ ಅಕ್ಷತಾಳ ಕಿರುಕುಳದಿಂದಲೇ ತಮ್ಮ ಪುತ್ರ ಗೋಪಿಕೃಷ್ಣ  ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದಾನೆಂದು ಮೃತನ ತಂದೆ ಪುಟ್ಟರಾಜೇಗೌಡರು  ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಕುರಿತು ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Accused – harassment – wife-Husband -surrenders –suicide-mysore