ಜಯಪುರ ಬಳಿ ಅಪಘಾತ: ಪಲ್ಟಿಯಾದ ಆಟೋ, ತಪ್ಪಿದ ಭಾರಿ ಅನಾಹುತ

Promotion

ಮೈಸೂರು, ಜನವರಿ 12, 2019 (www.justkannada.in): ಬೈಕ್ ಮತ್ತು ಆಟೋ ನಡುವೆ ಡಿಕ್ಕಿಯಾಗಿ ಸಂಭವಿಸಬೇಕಿದ್ದ ಭಾರಿ ಅನಾಹುತವೊಂದು ತಪ್ಪಿದೆ.

ಘಟನೆಯಲ್ಲಿ ಬೈಕ್ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗದ್ದಿಗೆ ರಸ್ತೆಯ ಗೋಹಳ್ಳಿ ಮತ್ತು ಕುಮಾರಬೀಡು ಮಧ್ಯೆ ಘಟನೆ ಸಂಭವಿಸಿದೆ. ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬೈಕ್ ಸವಾರ ಮತ್ತು ಆಟೋದ ಮಾಲೀಕರು ಯಾರು ಎಂದು ತಿಳಿದು ಬಂದಿಲ್ಲ. ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣವಾಗಿದೆ.