ಅಪಘಾತವಾಗಿದ್ದು ನನ್ನಿಂದಲ್ಲ: ನನ್ನ ಕಾರು ಚಾಲಕನಿಂದ-ವಿಚಾರಣೆ ಬಳಿಕ ಶಾಸಕ ಹ್ಯಾರೀಸ್ ಪುತ್ರ ನಲಪಾಡ್ ಹೇಳಿಕೆ…

Promotion

ಬೆಂಗಳೂರು,ಫೆ,12,2020(www.justkannada.in):  ಫೆಬ್ರವರಿ 9 ರಂದು ಮೇಖ್ರಿ ಸರ್ಕಲ್ ಬಳಿಯ ಸರಣಿ ಅಪಘಾತ ಪ್ರಕರಣಕ್ಕೆ ಸಂಬಂಧ. ನಾನು ಅಪಘಾತ ಮಾಡಿಲ್ಲ. ನನ್ನ ಕಾರು ಚಾಲಕ ಚಾಲನೆ ಮಾಡುತ್ತಿದ್ದ ನಾನು ಆ ವೇಳೆ ಅಲ್ಲಿಯೇ ಇದ್ದೆ. ಅಪಘಾತವಾಗಿದ್ದು ನನ್ನಿಂದಲ್ಲ ಎಂದು ಕಾಂಗ್ರೆಸ್ ಶಾಸಕ ಹ್ಯಾರೀಸ್ ಪುತ್ರ ನಲಪಾಡ್ ತಿಳಿಸಿದ್ದಾರೆ.

ಮೇಖ್ರಿ ಸರ್ಕಲ್ ಬಳಿ ಕಳೆದ ಭಾನುವಾರ ಸರಣಿ ಅಪಘಾತ ನಡೆದಿತ್ತು. ಆಟೋ, ಬೈಕ್ ಗೆ ಬೆಂಟ್ಲಿ ಕಾರು ಗುದ್ದಿದ ಪರಿಣಾಮ, ಆಟೋ ಚಾಲಕ, ಇಬ್ಬರು ಪ್ರಯಾಣಿಕರು ಹಾಗೂ ಬೈಕ್ ಸವಾರ ಗಾಯಗೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸಿದ್ದು ಶಾಸಕ ಹ್ಯಾರೀಸ್ ಪುತ್ರ ನಲಪಾಡ್ ಕಾರು ಅಪಘಾತ ಮಾಡಿದ್ದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿತ್ತು.

ಈ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ನಲಪಾಡ್ ಗೆ ನೋಟೀಸ್ ನೀಡಿದ ಹಿನ್ನೆಲೆ ನಲಪಾಡ್ ಇಂದು ಸದಾಶಿವನಗರ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದರು. ವಿಚಾರಣೆ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ನಲಪಾಡ್,

ನಾನು ಅಪಘಾತ ಮಾಡಿಲ್ಲ. ನನ್ನ ಕಾರು ಚಾಲಕ ಬಾಲು ಕಾರು ಚಲಾಯಿಸುತ್ತಿದ್ದ. ದಯವಿಟ್ಟು ನನ್ನನ್ನು ಬಿಟ್ಟುಬಿಡಿ. ಹಿಂದಿನ ಘಟನೆ ಬಳಿಕ ಬದಲಾಗಿದ್ದೇನೆ. ನಾನು ಬದಲಾಗಿದ್ದೀನಿ,  ಅಪಘಾತ ನಾನು ಮಾಡಿಲ್ಲವಾದರೂ ಗಾಯಾಳುಗಳನ್ನು ನಾನೇ ಆಸ್ಪತ್ರೆಗೆ ಸೇರಿಸಿದ್ದೆ. ಚಿಕಿತ್ಸೆ ಕೊಡಿಸಿ ಪರಿಹಾರ ಕೊಟ್ಟಿದ್ದೇನೆ ಎಂದು ತಿಳಿಸಿದ್ದಾರೆ.

Key words: accident -my -car driver-MLA Harris –son- Nalapad