“ಅಪಘಾತದಲ್ಲಿ ಮೃತಪಟ್ಟ ಮಂಗನಿಗೆ ಅಂತ್ಯ ಸಂಸ್ಕಾರ ಮಾಡಿ ಮಾನವೀಯತೆ ಮೆರೆದ ಯುವಕ”

Promotion

ಮಂಡ್ಯ,ಮಾರ್ಚ್,24,2021(www.justkannada.in) : ಹೆದ್ದಾರಿ ಅಪಘಾತದಲ್ಲಿ ಮೃತಪಟ್ಟ ಮಂಗನಿಗೆ ಅಂತ್ಯ ಸಂಸ್ಕಾರ ಮಾಡುವ ಮೂಲಕ ಯುವಕನೊಬ್ಬ ಮಾನವೀಯತೆ ಮೆರೆದಿದ್ದಾನೆ.

jkಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಮಂಗ ಒಂದು ಅಪಘಾತದಲ್ಲಿ ಮೃತಪಟ್ಟಿತ್ತು. ಈ ವೇಳೆ  ಶ್ರೀರಂಗಪಟ್ಟಣದ ಯುವಕ ರಮೇಶ್ ಮಂಗನಿಗೆ ಅಂತ್ಯ ಸಂಸ್ಕಾರ ನೆರವೇರಿಸಿ ಮಾನವೀಯತೆ ಮೆರೆದಿದ್ದಾನೆ.

ಹೆದ್ದಾರಿಯಲ್ಲಿ ಮಂಗನಿಗೆ ಅಪಘಾತ‌ ಮಾಡಿ ಕಾರು ಚಾಲಕ ಕಾರ್ ನಿಲ್ಲಿಸದೆ ಹಾಗೆಯೇ ಹೋಗಿದ್ದ. ಇದನ್ನು ಗಮನಿಸಿದ ಯುವಕ ಗಾಯಗೊಂಡ ಕೋತಿಯನ್ನು ಆಸ್ಪತ್ರೆಗೆ ಕರೆದೊಯ್ದು ಆದರೆ, ಆ ಕೋತಿ ಬದುಕಿಳಿಯಲಿಲ್ಲ.

accident-Dead-monkey-Funeral-Humanity-young man 

ಮೃತ ಕೋತಿಯನ್ನು ಕಾವೇರಿ ನದಿ ದಂಡೆಯಲ್ಲಿ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ಮಾಡಿದ್ದು, ಹೆದ್ದಾರಿಯಲ್ಲಿ ಜಾಗೂರುಕತೆಯಿಂದ ವಾಹನ ಚಲಾಯಿಸಿ ಪ್ರಾಣಿಗಳಿಗೂ ಜೀವವಿದೆ ಎಂದು ಮಾನವೀಯತೆ ಮೆರೆದ ರಮೇಶ್ ಮನವಿ ಮಾಡಿದ್ದಾರೆ.

key words : accident-Dead-monkey-Funeral-Humanity-young man