ಗೂಡ್ಸ್ ಲಾರಿ ಮತ್ತು ಬಸ್ ನಡುವೆ ಅಪಘಾತ: ಚಾಲಕ ಸ್ಥಳದಲ್ಲೇ ಸಾವು…..

Promotion

ಮಂಗಳೂರು,ಮಾರ್ಚ್,25,2021(www.justkannada.in): ಖಾಸಗಿ ಬಸ್ ಹಾಗೂ ಗೂಡ್ಸ್ ಲಾರಿ  ಮುಖಾಮುಖಿ ಡಿಕ್ಕಿಯಾಗಿ ಲಾರಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ  ನಿನ್ನೆ ರಾತ್ರಿ ಸಂಭವಿಸಿದೆ.jk

ಮಂಗಳೂರು ಸಮೀಪದ ಕಡಬ ಕೌಕ್ರಾಡಿಯ ಮಣ್ಣುಗುಂಡಿಯಲ್ಲಿ ಈ ಘಟನೆ ಸಂಭವಿಸಿದೆ.  ಕುಂದಾಪುರದಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ಹಾಗೂ ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಕ್ಯಾಂಟರ್ ಗೂಡ್ಸ್ ಲಾರಿ ನಡುವೆ ಬುಧವಾರ ರಾತ್ರಿ 11.30ರ ಸುಮಾರಿಗೆ ಅಪಘಾತ ಸಂಭವಿಸಿದೆ.

ಕುಂದಾಪುರದಿಂದ ಬೆಂಗಳೂರಿಗೆ ತೆರಳುತ್ತಿದ್ದ KA 20 AA 8078 ನೊಂದಣಿ ಸಂಖ್ಯೆಯ ಬಸ್ ಹಾಗೂ ಬೆಂಗಳೂರಿನಿಂದ ಮಂಗಳೂರಿಗೆ ಗೂಡ್ಸ್ ತರುತ್ತಿದ್ದ KA 51 AF 6308 ನೋಂದಣಿ ಸಂಖ್ಯೆಯ ಕ್ಯಾಂಟರ್ ಗೂಡ್ಸ್ ಲಾರಿ ಮುಖಾಮುಖಿ ಡಿಕ್ಕಿ ಹೊಡೆದಿದ್ದು, ಅಪಘಾತದಲ್ಲಿ ಎರಡೂ ವಾಹನಗಳಿಗೆ ಬೆಂಕಿ ತಗುಲಿ, ಭಾಗಶಃ ಬೆಂಕಿಗೆ ಆಹುತಿಯಾಗಿದೆ.Accident- between -goods lorry - private bus- Driver dies -on the spot.

ಇನ್ನು ಘಟನೆಯಲ್ಲಿ ಲಾರಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದು,  ಬಸ್ ನಲ್ಲಿದ್ದ ಚಾಲಕ ಹಾಗು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು,ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Accident- between -goods lorry – private bus- Driver dies -on the spot.