ಪೊಲೀಸ್ ಠಾಣೆ ಮೇಲೆ ಎಸಿಬಿ ದಾಳಿ: ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ಧ ಪಿಎಸ್ ಐ ಮತ್ತು ಇಬ್ಬರು ಪಿಸಿಗಳು.

Promotion

ಬೆಳಗಾವಿ,ಜುಲೈ,9,2021(www.justkannada.in):  ಲಂಚ ಸ್ವೀಕರಿಸುತ್ತಿದ್ದ ವೇಳೆ ಪಿಎಸ್ ಐ ಮತ್ತು ಇಬ್ಬರು ಪಿಸಿಗಳು ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಸಿಕ್ಕಿ ಬಿದ್ದಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.jk

 ಬೆಳಗಾವಿ ಜಿಲ್ಲೆ ಚಿಕ್ಕೋಡಿಯ ಸದಲಗಾ ಪೊಲೀಸ್ ಠಾಣೆಯ ಮೇಲೆ ರಾತ್ರಿ ಎಸಿಬಿ ದಾಳಿ ನಡೆಸಿದ್ದು, ಈ ವೇಳೆ ಲಂಚ ಪಡೆಯುತ್ತಿದ್ದ ಪಿಎಸ್‌ಐ ಮತ್ತು ಇಬ್ಬರು ಕಾನ್ಸ್ ಟೇಬಲ್ ಗಳು  ಸಿಕ್ಕಿಬಿದ್ದಿದ್ದಾರೆ. ಸದಲಗಾ ಪೊಲೀಸ್ ಠಾಣೆ ಎಸ್‌ಐ ಕುಮಾರ್ ಹಿತ್ತಲಮನಿ ಕಾನ್ಸ್‌ ಟೇಬಲ್‌ ಮಾಯಪ್ಪ ಗಡ್ಡೆ, ಶ್ರೀಶೈಲ ಮಂಗಿ ಬಲೆಗೆ ಬಿದ್ದ ಪೊಲೀಸರು.

ಬೋರಗಾಂವ್‌ ನಲ್ಲಿರುವ ಪಾನ್ ಮಸಾಲ ಕಾರ್ಖಾನೆ ಮಾಲೀಕ ರಾಜು ಪಾಶ್ಚಾಪುರೆ ಬಳಿ 50 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಆ ಹಣವನ್ನ ನೀಡುವಂತೆ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಈ ಬಗ್ಗೆ ರಾಜು ಪಾಶ್ಚಾಪುರೆ ಎಸಿಬಿಗೆ ದೂರು ನೀಡಿದ್ದರು. ಅದರಂತೆ ತಡರಾತ್ರಿ ಪಿಎಸ್ ಐ ಮತ್ತು ಪಿಸಿಗಳು 40 ಸಾವಿರ ರೂ. ಲಂಚ ಪಡೆಯುವಾಗ ಎಸಿಬಿ ದಾಳಿ ಮಾಡಿದೆ. ಈ ವೇಳೆ ಪಿಎಸ್‌ಐ ಮತ್ತು ಇಬ್ಬರು ಕಾನ್ ಸ್ಟೇಬಲ್ ಗಳು ಸಿಕ್ಕಿಬಿದ್ದಿದ್ದಾರೆ.

Key words: ACB -attack – police station-PSI -two PCs – red hand.