ಅಂಬಿ ಹುಟ್ಟುಹಬ್ಬಕ್ಕೆ ಅಭಿ 2ನೇ ಚಿತ್ರದ ಟೈಟಲ್, ಫಸ್ಟ್ ಲುಕ್ ರಿಲೀಸ್ !

Promotion

ಬೆಂಗಳೂರು, ಮೇ 29, 2020 (www.justkannada.in): ಅಭಿಷೇಕ್ ಅಂಬರೀಶ್ ಎರಡನೇ ಸಿನಿಮಾ ಅನೌನ್ಸ್ ಆಗಿದ್ದು, ಫಸ್ಟ್ ಲುಕ್ ಮತ್ತು ಟೈಟಲ್ ರಿಲೀಸ್ ಆಗಿದೆ.

ಅಭಿಷೇಕ್ ಎರಡನೇ ಸಿನಿಮಾಗೆ ದುನಿಯಾ ಸೂರಿ ನಿರ್ದೇಶನ ಮಾಡುತ್ತಿದ್ದು, ಚಿತ್ರಕ್ಕೆ ಬ್ಯಾಡ್ ಮ್ಯಾನರ್ಸ್ ಅಂತ ಟೈಟಲ್ ಇಡಲಾಗಿದೆ. ಸದ್ಯ ಫಸ್ಟ್ ಲುಕ್ ರಿಲೀಸ್ ಮಾಡಿರುವ ಚಿತ್ರತಂಡ, ರೆಬೆಲ್ ಸ್ಟಾರ್ ಅಂಬರೀಷ್ ಹುಟ್ಟುಹಬ್ಬದ ಪ್ರಯುಕ್ತ ಇದೇ ಚಿತ್ರದ ಮೋಷನ್ ಪೋಸ್ಟರ್ ನ ರಿಲೀಸ್ ಮಾಡುತ್ತಿದೆ.

ರೊಮ್ಯಾಂಟಿಕ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅಭಿಷೇಕ್ ‘ಬ್ಯಾಡ್ ಮ್ಯಾನರ್ಸ್’ ಮಾಸ್ ಸಿನಿಮಾದಲ್ಲಿ ಹೇಗೆ ಕಾಣಲಿದ್ದಾರೆ ಎನ್ನುವುದು ಅಭಿಮಾನಿಗಳ ಕುತೂಹಲವಾಗಿದೆ.