ಸೋನಿಯಾ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ: ಅರ್ನಬ್​ ಗೋಸ್ವಾಮಿ ವಿರುದ್ಧ ವಿವಿಧೆಡೆ ದೂರು

Promotion

ಮುಂಬೈ, ಏಪ್ರಿಲ್ 23, 2020 (www.justkannada.in): :  ರಿಪಬ್ಲಿಕ್​ ಟಿವಿಯ ಸಂಸ್ಥಾಪಕ ಹಾಗೂ ಸಂಪಾದಕರೂ ಆಗಿರುವ ಅರ್ನಬ್​ ಗೋಸ್ವಾಮಿ ವಿರುದ್ಧ ಕಾಂಗ್ರೆಸ್​ ನಾಯಕರು ಪೊಲೀಸ್​ ದೂರುಗಳ ಸುರಿಮಳೆ ಗೈದಿದ್ದಾರೆ.

ಕಾಂಗ್ರೆಸ್​ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಕಾಂಗ್ರೆಸ್ ನಾಯಕರು ಅರ್ನಬ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಲ್ಘಾರ್​​ ಗುಂಪು ಹತ್ಯೆ ಪ್ರಕರಣವನ್ನು ಸೋನಿಯಾ ಗಾಂಧಿಗೆ ತಳುಕು ಹಾಕಿ, ಅವರ ವಿರುದ್ಧ ತಮ್ಮ ಮಾಧ್ಯಮದಲ್ಲಿ ಅವಹೇಳನಕಾರಿ ಭಾಷೆಯನ್ನು ಉಪಯೋಗಿಸಿ, ಉದ್ದೇಶಪೂರ್ವಕವಾಗಿಯೇ ದ್ವೇಷಪೂರಿತ ಮಾತುಗಳನ್ನು ಆಡಿದ್ದಾರೆ ಎಂದು ಆರೋಪಿಸಿ, ಛತ್ತೀಸ್​ಗಢದ ಕಾಂಗ್ರೆಸ್​ ನಾಯಕರು ರಾಯ್​ಪುರ್​ದಲ್ಲಿ ದೂರು ದಾಖಲಿಸಿದ್ದು, ಎಫ್​ಐಆರ್​ ದಾಖಲು ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ. ಇದೇ ರೀತಿ ದೇಶದ ನಾನಾ ರಾಜ್ಯಗಳಲ್ಲಿ ಕಾಂಗ್ರೆಸ್ ನಾಯಕರು ದೂರು ದಾಖಲಿಸಿದ್ದಾರೆ.