ಸಿಎಎ ಮತ್ತು ಎನ್ ಆರ್ ಸಿ ವಿರೋಧಿಸಿ ಬೆಂಗಳೂರಿನ 9 ಮಾರುಕಟ್ಟೆಗಳು ಬಂದ್..

ಬೆಂಗಳೂರು,ಜ,21,2020(www.justkannada.in):  ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್ ಆರ್ ಸಿ ವಿರೋಧಿಸಿ ಬೆಂಗಳೂರಿನಲ್ಲಿ 9 ಮಾರುಕಟ್ಟೆಗಳನ್ನ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುತ್ತಿದೆ.

ನಗರದ ಚಾಂದಿನಿ ಚೌಕದಲ್ಲಿ ಬೆಳಗ್ಗೆ 11 ಗಂಟೆಗೆ ಪ್ರತಿಭಟನೆ ಆರಂಭವಾಗಲಿದ್ದು, ಕಂಟೋನ್ಮೆಂಟ್  ಬಳಿ ಇರುವ  9ಕ್ಕೂ ಹೆಚ್ಚು ಮಾರುಕಟ್ಟೆಗಳು ವ್ಯಾಪಾರ ಬಂದ್ ಮಾಡಿ ಸಿಎಎ ಮತ್ತು ಎನ್ ಆರ್ ಸಿ ವಿರುದ್ದ  ಧರಣಿ ನಡೆಸಲಾಗುತ್ತಿದೆ. ಮಾರುಕಟ್ಟೆ, ಅಂಗಡಿ ಮುಂಗಟ್ಟು ಪುಟ್ ಪಾತ್ ಅಂಗಡಿಗಳನ್ನ ಬಂದ್ ಮಾಡಲಾಗಿದೆ.

ಪ್ರತಿಭಟನೆಯಲ್ಲಿ. 10 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದ್ದು, ಭದ್ರತೆಗಾಗಿ 500 ಮಂದಿ ಪೊಲೀಸರನ್ನು ನಿಯೋಜಿಸಲಾಗಿದೆ.  ಸಿಎಎ  ಪರ ಮತ್ತು ವಿರುದ್ದವಾಗಿ ಬೆಂಗಳೂರಲ್ಲಿ  ಇತ್ತೀಚೆಗೆ ಹಲವು ಬೃಹತ್ ಪ್ರತಿಭಟನೆಗಳು ನಡೆದಿದ್ದವು. ಇದೀಗ ಮತ್ತೆ ಸಿಎಎ ವಿರುದ್ದ ರಾಜ್ಯರಾಜಧಾನಿಯಲ್ಲಿ ಧ್ವನಿ ಎತ್ತಲಾಗಿದೆ.

Key words: 9 markets –bandh-Bangalore- against -CAA and NRC.