ದೇಶದದಲ್ಲಿ ಒಂದೇ ದಿನ 8,329 ಕೋವಿಡ್ ಪ್ರಕರಣಗಳು ಪತ್ತೆ.

Promotion

ನವದೆಹಲಿ,ಜೂನ್,11,2022(www.justkannada.in): ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು , ಇದೀಗ ಒಂದೇ ದಿನದಲ್ಲಿ 8,329 ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ.

ಈ ಕುರಿತು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ್ದು,  ಕಳದ 24 ಗಂಟೆಗಳಲ್ಲಿ 8,329 ಮಂದಿಗೆ ಕೋವಿಡ್ ತಗುಲಿದ್ದು ಇದೇ ಅವಧಿಯಲ್ಲಿ 10 ಜನರು ಕೋವಿಡ್ ಗೆ ಬಲಿಯಾಗಿದ್ದಾರೆ.  ಈ ಮೂಲಕ ದೇಶದಲ್ಲಿ ಈವರೆಗೆ ಕೋವಿಡ್ ನಿಂದ  ಸಾವನ್ನಪ್ಪಿದವರ ಸಂಖ್ಯೆ 5,24,757 ಕ್ಕೆ ಏರಿಕೆಯಾಗಿದೆ.

ಇನ್ನು ದೇಶದಲ್ಲಿ 40,370 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು, 24 ಗಂಟೆಯಲ್ಲಿ 4,216 ಜನರು ಕೋವಿಡ್ ನಿಂದ ಗುಣಮುಖರಾಗಿದ್ದಾರೆ. ದೇಶದಲ್ಲಿ ಈವರೆಗೆ 4,26,48,308 ಜನರು ಕೋವಿಡ್ ನಿಂದ ಗುಣಮುಖರಾಗಿದ್ದಾರೆ. ನಿನ್ನೆ 15,08,406 ಜನರಿಗೆ ವ್ಯಾಕ್ಸಿನ್ ನೀಡಲಾಗಿದ್ದು, ದೇಶದಲ್ಲಿ ಈವರೆಗೆ 1,94,92,71,111 ಡೋಸ್ ಲಸಿಕೆ ಹಾಕಲಾಗಿದೆ.

Key words: 8,329 -Covid cases -detected – single day – country.