ಮೈಸೂರಿನಲ್ಲಿ 75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ: ಧ್ವಜಾರೋಹಣ ನೆರವೇರಿಸಿ ದೇಶದ ಸ್ವತಂತ್ರ ಸೇನಾನಿಗಳ ಸ್ಮರಣೆ.

ಮೈಸೂರು,ಆಗಸ್ಟ್,15,2021(www.justkannada.in):  ದೇಶಾದ್ಯಂತ ಇಂದು 75ನೇ ಸ್ವಾತಂತ್ರ್ಯೋತ್ಸವ ಸಂಭ್ರಮ ಹಿನ್ನೆಲೆಯಲ್ಲಿ ಇಂದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿವಿಧೆಡೆ  ಧ್ವಜಾರೋಹಣ ನೆರವೇರಿಸಿ ಸ್ವತಂತ್ರ ಸೇನಾನಿಗಳನ್ನ ಸ್ಮರಣೆ ಮಾಡಲಾಯಿತು.

ನಗರದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನ ಆಯೋಜಿಸಿದ್ಧ 75ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಧ್ವಜಾರೋಹಣ ನೆರವೇರಿಸಿದರು. ಈ ವೇಳೆ ದೇಶದ ಸ್ವತಂತ್ರ ಸೇನಾನಿಗಳನ್ನ ನೆನೆದರು.

ಈ ವೇಳೆ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ನೀಡಿದ ಕರೆಯ ಮೇರೆಗೆ ಆತ್ಮ ನಿರ್ಭರ ಭಾರತ ನಿರ್ಮಾಣದ ಕಡೆ ದೇಶ ಸಾಗುತ್ತಿದೆ. ಅನಿರೀಕ್ಷಿತವಾಗಿ ಬಂದ ಕೋವಿಡ್ 19ನ್ನು ದೇಶ ಹಾಗೂ ರಾಜ್ಯ ಸಮರ್ಥವಾಗಿ ಎದುರಿಸಿದೆ. ಎಲ್ಲರಿಗೂ ಲಸಿಕೆ ನೀಡುವ ಮೂಲಕ ದೇಶ ಪ್ರಗತಿ ಸಾಧಿಸಿದೆ. ರಾಜ್ಯದಲ್ಲಿ ಈ ವರಗೆ 4ಕೋಟಿ ಲಸಿಕೆಯನ್ನು ಉಚಿತವಾಗಿ ನೀಡಿದೆ. ಲಾಕ್ ಡೌನ್ ಸಂಕಷ್ಟಕ್ಕೆ ಒಳಗಾದ ಬಡವರು, ವಲಸೆ, ಕಾರ್ಮಿಕರು, ರೈತರು ಸೇರಿದಂತೆ ಹಲವು ವಿಭಾಗದ ಹಿತರಕ್ಷಣೆಗೆ ಸರ್ಕಾರ ನೆರವಾಗಿದೆ ಎಂದು ತಿಳಿಸಿದರು.

ಶಾಸಕ ಎಸ್.ಎ ರಾಮದಾಸ್ ಅವರಿಂದ ಧ್ವಜಾರೋಹಣ…

ಇಂದು 75ನೇ ಸ್ವತಂತ್ರ ದಿನಾಚರಣೆಯ ಅಂಗವಾಗಿ ಕೃಷ್ಣರಾಜ ವಿಧಾನ ಸಭೆ ಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವರಾದ ಎಸ್.ಎ.ರಾಮದಾಸ್ ರವರು ತಮ್ಮ ವಿದ್ಯಾರಣ್ಯಪುರಂನಲ್ಲಿ ಇರುವ ಗೃಹ ಕಛೇರಿಯ ಆವರಣದಲ್ಲಿ ಸಾರ್ವಜನಿಕರೊಂದಿಗೆ ಹಾಗೂ ಪಕ್ಷದ ಕಾರ್ಯಕರ್ತರೊಂದಿಗೆ ದ್ವಜಾರೋಹಣ ನಡೆಸಿ ಸ್ವತಂತ್ರ ಸೇನಾನಿಗಳನ್ನ ಸ್ಮರಿಸಿದರು.

ಈ ಕಾರ್ಯಕ್ರಮದಲ್ಲಿ ಕೃಷ್ಣರಾಜ ಕ್ಷೇತ್ರದ ಅಧ್ಯಕ್ಷರಾದ ಎಂ.ವಡಿವೇಲು, ಪ್ರಧಾನ ಕಾರ್ಯದರ್ಶಿಗಳಾದ ನಾಗೇಂದ್ರ ಕುಮಾರ್, ಕಾರ್ಯದರ್ಶಿ ಗಿರೀಶ್ ಗೌಡ, ನಾಮ ನಿರ್ದೇಶಿತ ಪಾಲಕೆ ಸದಸ್ಯರಾದ ಪಿ.ಟಿ.ಕೃಷ್ಣ, ಎಸ್ ಸಿ ಮೋರ್ಚಾ ಅಧ್ಯಕ್ಷರಾದ ಮುರುಳಿ, ನೂರ್ ಫಾತಿಮಾ, ಮಧು, ವಿಜಯ ನಾಯಕ, ಶಿವಪ್ರಸಾದ್,  ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.

ಕೆಎಸ್ ಒಯು ನಲ್ಲಿ 75ನೇ ಸ್ವಾತಂತ್ರ್ಯೋತ್ಸವ…

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಇಂದು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ. ಎಸ್. ವಿದ್ಯಾಶಂಕರ್ ಅವರು ಧ್ವಜಾರೋಹಣ ನಡೆಸಿ ಮಾತನಾಡಿದರು. ಹಿರಿಯ ಸ್ವಾತಂತ್ರ್ಯ ಹೋರಾಟಗಾರ 94 ವರ್ಷದ ಸಿ.ಆರ್. ರಂಗಶೆಟ್ಟಿ ಅವರು ಈ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸ್ವಾತಂತ್ರ್ಯಕ್ಕಾಗಿ ತಾವು ಮತ್ತು ತಮ್ಮವರು ಹೋರಾಡಿದ ಕೆಲವು ಘಟನೆಗಳನ್ನು ಮೆಲಕು ಹಾಕಿದರು.

ಕುಲಸಚಿವ ಹಾಗೂ ಹಿರಿಯ ಇತಿಹಾಸ ಪ್ರಾಧ್ಯಾಪಕ ಪ್ರೊ. ಆರ್. ರಾಜಣ್ಣ, ಪರೀಕ್ಷಾಂಗ ಕುಲಸಚಿವ ಪ್ರೊ. ಕೆ.ಎಂ. ಮಹದೇವನ್, ಹಣಕಾಸು ಅಧಿಕಾರಿ ಡಾ. ಎ. ಖಾದರ್‍ಪಾಷ, ಡೀನ್ ಶೈಕ್ಷಣಿಕ ಪ್ರೊ. ಕಾಂಬ್ಳೆ ಅಶೋಕ್, ಡೀನ್ ಅಧ್ಯಯನ ಕೇಂದ್ರ ಡಾ. ಷಣ್ಮುಖ, ಇನ್ನಿತರ ಅಧಿಕಾರಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯವರು ಭಾಗವಹಿಸಿದ್ದರು. ಕಾರ್ಯಕ್ರಮದ ನೋಡಲ್ ಅಧಿಕಾರಿ ಡಾ. ಎನ್.ಆರ್. ಚಂದ್ರೇಗೌಡ ಸ್ವಾಗತಿಸಿದರು ಹಾಗೂ ಡಾ. ಜೆ.ಎಸ್. ಚಂದ್ರಶೇಖರ್ ಉಪಸ್ಥಿತರಿದ್ದರು.

Key words: 75th Independence Day- Celebration – Mysore-minister- ST Somashekar