ಈ ವರ್ಷ ಸಾಕಷ್ಟು ಸವಾಲಿನ ಮಧ್ಯೆ ಕೆಲಸ ಮಾಡಬೇಕಿದೆ-ರಾಜ್ಯಪಾಲ ವಜುಭಾಯಿ ವಾಲಾರಿಂದ ಭಾಷಣ…

Promotion

ಬೆಂಗಳೂರು,ಜನವರಿ,26,2021(www.justkannada.in): ನಾವೀಗ ಕೋವಿಡ್-19 ಕೊನೆಯ ಹಂತಕ್ಕೆ ತಲುಪಿದ್ದೇವೆ. ಈ ವರ್ಷ ಸಾಕಷ್ಟು ಸವಾಲಿನ ಮಧ್ಯೆ ಕೆಲಸ ಮಾಡಬೇಕಿದೆ ಎಂದು ರಾಜ್ಯಪಾಲ ವಜುಭಾಯಿ ವಾಲಾ ತಿಳಿಸಿದರು.jk

72ನೇ ಗಣರಾಜ್ಯೋತ್ಸವ ಸಂಭ್ರಮ ಹಿನ್ನೆಲೆ ನಗರದ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ರಾಜ್ಯಪಾಲ ವಜುಬಾಯಿ ವಾಲಾ ಅವರು ಮಾತನಾಡಿದರು.

ರಾಜ್ಯದ  ಜನತೆಗೆ ಗಣತಂತ್ರ ದಿನದ ಶುಭಾಶಯಗಳು, ಕೋವಿಡ್ ಕೊನೆಯ ಹಂತಕ್ಕೆ ತಲುಪಿದ್ದರೂ ಕಡ್ಡಾಯವಾಗಿ ದೈಹಿಕ ಅಂತರ ಕಾಪಾಡುವುದು, ಮುಖಗವಸು ಧರಿಸುವುದು ಮತ್ತು ಸ್ಯಾನಿಟೈಜರ್ ಬಳಕೆ ತಪ್ಪದೇ ಮಾಡಬೇಕು. ಈ ಮೂರು ಮಂತ್ರವನ್ನು ನಿರಂತರವಾಗಿ ಪಾಲಿಸಬೇಕು ಎಂದರು.72th-republic-day-speech-governor-vajubhai-wala

ಈ ವರ್ಷ ಸಾಕಷ್ಟು ಸವಾಲಿನ ಮಧ್ಯೆ ಕೆಲಸ ಮಾಡಬೇಕಿದೆ. ಮೋದಿ ಅವರ ದೂರದೃಷ್ಠಿಯಿಂದ ಆತ್ಮನಿರ್ಬರ ಭಾರತ ನಿರ್ಮಾಣ ಮಾಡುತ್ತಿದ್ದೇವೆ. ಹಿಡಿ ವಿಶ್ವದಲ್ಲೇ ಅತಿದೊಡ್ಡ ಲಸಿಕೆ ಅಭಿಯಾನ ನಡೆಸುತ್ತಿರುವ ಹೆಮ್ಮೆ ಭಾರತದ್ದು ಲಸಿಕೆ ಅಭಿಯಾನಕ್ಕೆ ನಾವು ಕೈಜೋಡಿಸಿದ್ದೇವೆ ಎಂದು ನುಡಿದರು.

 

Key words: 72th Republic Day  -Speech –Governor- Vajubhai Wala.