ಕೆಆರ್ ಎಸ್ ನಿಂದ 72,964 ಕ್ಯೂಸೆಕ್ ನೀರು ಹೊರಕ್ಕೆ: ಅಪಾಯಮಟ್ಟ ಮೀರಿ ಹರಿಯುತ್ತಿರುವ ಕಾವೇರಿ ನದಿ.

Promotion

ಮಂಡ್ಯ,ಜುಲೈ,11,2022(www.justkannada.in):  ರಾಜ್ಯಾದ್ಯಂತ ಭಾರಿ ಮಳೆಯಾಗುತ್ತಿರುವ ಹಿನ್ನೆಲೆ ಜಲಾಶಯಗಳು ಭರ್ತಿಯತ್ತ ಸಾಗುತ್ತಿದ್ದು ನೀರನ್ನ ಹೊರಬಿಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನದಿಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗುತ್ತಿದೆ.

ಈ ಮಧ್ಯೆ ಕಾವೇರಿ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆ ಹಿನ್ನೆಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್ ಎಸ್ ಜಲಾಶಯ ಭರ್ತಿಯಾಗಲು ಕೇವಲ ಅಡಿ ಅಡಿ ಮಾತ್ರ ಬಾಕಿ ಇದ್ದು, 72,964 ಕ್ಯೂಸೆಕ್ ನೀರನ್ನ ಡ್ಯಾಂನಿಂದ ಹೊರಕ್ಕೆ ಬಿಡಲಾಗಿದೆ.

ನೀರು ರಿಲೀಸ್ ಮಾಡಿದ ಹಿನ್ನೆಲೆ ಕಾವೇರಿ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು ನದಿ ತೀರದ ಜಮೀನುಗಳು ಜಲಾವೃತವಾಗಿವೆ. ಇನ್ನು ನದಿಬಳಿ ಪ್ರವಾಸಿಗರು ತೆರಳದಂತೆ ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿದೆ. ನಿಮಿಷಾಂಬ ದೇಗುಲ, ಸ್ನಾನಘಟ್ಟದ ಬಳಿ ಬ್ಯಾರಿಕೇಡ್ ಅಳವಡಿಸಲಾಗಿದೆ.

Key words: 72,964 cusecs –water- released – KRS.