ಮೈಸೂರಿನಲ್ಲಿ ಜೂಜಾಡುತ್ತಿದ್ದ 3 ಮಹಿಳೆಯರು ಸೇರಿ 7 ಮಂದಿ ಬಂಧನ: ನಗದು ಹಣ ವಶ.

Promotion

ಮೈಸೂರು,ಡಿಸೆಂಬರ್,19,2022(www.justkannada.in): ಅಂದರ್ ಬಾಹರ್ ಜೂಜಾಡುತ್ತಿದ್ದ 3 ಮಹಿಳೆಯರು ಸೇರಿದಂತೆ 7 ಜನರನ್ನ ಮೈಸೂರು ಸಿಸಿಬಿ ಪೊಲೀಸರು ಬಂಧಿಸಿ  33,500 ರೂ. ನಗದು ಹಣವನ್ನ ವಶಕ್ಕೆ ಪಡೆದಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಮೈಸೂರು ನಗರ ಸಿ.ಸಿ.ಬಿ ಪೊಲೀಸರು ಹೆಬ್ಬಾಳು ಪೊಲೀಸ್ ಠಾಣಾ ವ್ಯಾಪ್ತಿಯ ಹೆಬ್ಬಾಳು  2ನೇ ಹಂತದಲ್ಲಿ  ದಾಳಿ ನಡೆಸಿ ಮನೆಯ ನೆಲ ಅಂತಸ್ತಿನಲ್ಲಿ ಜೂಜಾಡುತ್ತಿದ್ದ  3 ಮಹಿಳೆಯರು ಸೇರಿ 7 ಮಂದಿ ಆರೋಪಿಗಳನ್ನ ಬಂಧಿಸಿದ್ದಾರೆ.  ಈ ವೇಳೆ ರೂ. 33,500/- ನಗದು ಹಣ ಹಾಗೂ ಇಸ್ಪೀಟ್ ಎಲೆಗಳನ್ನು  ವಶಕ್ಕೆ ಪಡೆದರು. ಈ ಸಂಬಂಧ ಹೆಬ್ಬಾಳು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಕಾರ್ಯಾಚರಣೆಯನ್ನ ಡಿ.ಸಿ.ಪಿ ಗೀತ. ಎಂ.ಎಸ್ ಹಾಗೂ  ಸಿ.ಸಿ.ಬಿ. ಘಟಕದ ಎ.ಸಿ.ಪಿ. ಅಶ್ವಥ್ ನಾರಾಯಣ ಅವರ ಮಾರ್ಗದರ್ಶನದಲ್ಲಿ ಸಿ.ಸಿ.ಬಿ ಪೊಲೀಸ್ ಇನ್ಸ್‌ಪೆಕ್ಟರ್‌ ಮಲ್ಲೇಶ್, ಪಿ.ಎಸ್.ಐ. ಪ್ರತಿಭಾ ಜಂಗವಾಡ, ಹೆಬ್ಬಾಳು ಪೊಲೀಸ್ ಠಾಣೆಯ ಪಿ.ಎಸ್.ಐ. ಸಹಿದಾ ಅಮ್ರಿನ್ ಮತ್ತು ಸಿಬ್ಬಂದಿಗಳಾದ ರಾಜು, ಜೋಸೆಫ್ ನರೋನ, ರಾಧೇಶ್, ರವಿ ಕುಮಾರ್, ಸುಬಾನಲ್ಲಾ ರವರು ಮಾಡಿದ್ದಾರೆ.

Key words: 7 people -arrested -gambling –Mysore-police