ರೈತರಿಗೆ 7 ಗಂಟೆ ಮೂರು ಪೇಸ್ ವಿದ್ಯುತ್ :ಯಾವುದೇ ಹಂತದಲ್ಲೂ ಎಸ್ಕಾಂಗಳ ಖಾಸಗೀಕರಣ ಇಲ್ಲ – ಇಂಧನ ಸಚಿವ ಸುನೀಲ್ ಕುಮಾರ್.

ಮೈಸೂರು,ಜನವರಿ,20,2023(www.justkannada.in): ರೈತರಿಗೆ ದಿನಕ್ಕೆ 7 ಗಂಟೆ ಮೂರು ಪೇಸ್ ವಿದ್ಯುತ್ ನೀಡುತ್ತಿದ್ದೇವೆ  ಏಪ್ರಿಲ್ ಮೇನಲ್ಲಿ  ವಿದ್ಯಾರ್ಥಿ ಬೇಡಿಕೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಆ ಬೇಡಿಕೆ ಈಡೇರಿಸುವ ಪ್ರಯತ್ನ ಮಾಡುತ್ತೇವೆ ಎಂದು ಇಂಧನ ಸಚಿವ ಸುನೀಲ್ ಕುಮಾರ್ ಹೇಳಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ  ಇಂಧನ ಸಚಿವ ಸುನಿಲ್ ಕುಮಾರ್, ಇಂಧನ ಸಚಿವನಾಗಿ ಅಧಿಕಾರ ವಹಿಸಿಕೊಂಡ ಈ ಎರಡು ವರ್ಷಗಳಲ್ಲಿ ಬಹಳ ಒಳ್ಳೆಯ ಕೆಲಸವನ್ನು ಮಾಡುತ್ತಿರುವ ತೃಪ್ತಿ ನನಗಿದೆ. ಈಗಾಗಲೇ ರಾಜ್ಯದಲ್ಲಿ 294 ಸಬ್ ಸ್ಟೇಷನ್ ಗಳ ಉನ್ನತೀಕರಿಸಲಾಗಿದೆ. ಇನ್ನೂ ಹಲವು ಅಭಿವೃದ್ಧಿ ಯೋಜನೆಗಳಿಗೆ ಇಂದು ಶಂಕುಸ್ಥಾಪನೆ ಮಾಡಿದ್ದೇವೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯಗಳಿಗೆ ಅಮೃತ ಯೋಜನೆ ಮೂಲಕ ಉಚಿತ 75  ಯುನಿಟ್ ವಿದ್ಯುತ್ ಕೊಡುವ ಕೆಲಸ ನಡೆಯುತ್ತಿದೆ. ಈ ಮೂಲಕ ನಮ್ಮ ಇಲಾಖೆಯನ್ನು ಜನಸ್ನೇಹಿ ಇಲಾಖೆಯಾಗಿ ಮಾಡುತಿದ್ದೇವೆ ಎಂದರು.

ಟಿಸಿ ಸುಟ್ಟುಹೋದರೆ ಕೇವಲ 24 ಗಂಟೆಯಲ್ಲಿ ಬದಲಾಯಿಸುವ ಕೆಲಸ ಮಾಡುತ್ತೇವೆ. ಹೊಸ ಹೊಸ ಯೋಜನೆಗಳು ಮತ್ತು ಆಲೋಚನೆಗಳೊಂದಿಗೆ ಇಲಾಖೆಯನ್ನು ಸದೃಢ ಮಾಡುತ್ತಿದ್ದೇವೆ. ರೈತರಿಗೆ ಲೋಡ್ ಶೆಡ್ಡಿಂಗ್ ಇಲ್ಲದೆ ದಿನದ 7 ಗಂಟೆ ಮೂರು ಪೇಸ್ ವಿದ್ಯುತ್ ಕೊಡುತ್ತಿದ್ದೇವೆ. ನಮ್ಮ ರೈತರಿಗೆ 7 ಗಂಟೆ ವಿದ್ಯುತ್ ಕೊಟ್ಟೆ ಕೊಡುತ್ತೇವೆ ಎಂದು ತಿಳಿಸಿದರು.

ಎಸ್ಕಾಂಗಳು ಲಾಭದ ಕಡೆ ಹೆಜ್ಜೆ ಇಡಬೇಕು. ಎಸ್ಕಾಂಗಳನ್ನ ದಿಕ್ಕು ತಪ್ಪಿಸುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ. ನಾವು ಯಾವುದೇ ಹಂತದಲ್ಲೂ ಎಸ್ಕಾಂಗಳನ್ನು ಖಾಸಗೀಕರಣ ಮಾಡುವುದಿಲ್ಲ. ಕುಸುಮ್ ಯೋಜನೆ ಅಡಿಯಲ್ಲಿ 4 ಲಕ್ಷಕ್ಕೂ ಹೆಚ್ಚು ರೈತರಿಗೆ ಐಪಿ ವಿದ್ಯುತ್ ನೀಡುತ್ತಿದ್ದೇವೆ. ಹೊಸ ಯೋಜನೆಗಳು, ಹಸಿರು ವಿದ್ಯುತ್ ಕಡೆಗೆ ಚಲಿಸುವ ಪ್ರಯತ್ನ ಮಾಡುತ್ತೇವೆ. ರೂಟ್ ಟಾಪ್, ಮೇಲ್ಚಾವಣಿಯಲ್ಲಿ ಸೋಲಾರ್ ವಿದ್ಯುತ್ ಉತ್ಪಾದಿಸಲು ಎಲ್ಲರಿಗೂ ಸಬ್ಸಿಡಿ ದರದಲ್ಲಿ ಧನಸಹಾಯವನ್ನು ಮಾಡುತ್ತೇವೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಿದ್ಯುತ್ ಚಾರ್ಜಿಂಗ್ ಸೆಂಟರ್ ಮಾಡಲು ಮುಂದಾಗಿದ್ದೇವೆ ಎಂದು ಸಚಿವ ಸುನೀಲ್ ಕುಮಾರ್ ಹೇಳಿದರು.

Key words: 7 hours- three pace -electricity – farmers-  Energy Minister -Sunil Kumar.