58 ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ: ಸ್ವಕ್ಷೇತ್ರದಲ್ಲೇ ಸಿಎಂ ಬೊಮ್ಮಾಯಿ ಹಾಗೂ ಸಚಿವರಿಗೆ ಮುಖಭಂಗ.

Promotion

 

ಬೆಂಗಳೂರು,ಡಿಸೆಂಬರ್,30,2021(www.justkannada.in): ರಾಜ್ಯದಲ್ಲಿ ಡಿಸೆಂಬರ್ 27ರಂದು ನಡೆದಿದ್ದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಇಂದು ಪ್ರಕಟಗೊಳ್ಳುತ್ತಿದ್ದು, ಸ್ವಕ್ಷೇತ್ರದಲ್ಲೇ ಸಿಎಂ ಬಸವರಾಜ ಬೊಮ್ಮಾಯಿ ಸಚಿವರಾದ ಶ್ರೀರಾಮುಲು, ಶಶಿಕಲಾ ಜೊಲ್ಲೆ ಅವರಿಗೆ ಮುಖಭಂಗವಾಗಿದೆ.

ಬಂಕಾಪುರ ಪುರಸಭೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದು,  ಸಿಎಂ ಬೊಮ್ಮಾಯಿ ಸ್ವಕ್ಷೇತ್ರದಲ್ಲಿ ಭಾರಿ ಮುಖಭಂಗವಾಗಿದೆ ಕಾಂಗ್ರೆಸ್ 14 ಬಿಜೆಪಿ 7 ಇತರೇ 2 ಕ್ಷೇತ್ರದಲ್ಲಿ ಗೆಲುವು ಸಾಧಿಸಿವೆ.ಹಾಗೆಯೇ ಹಾವೇರಿ ಜಿಲ್ಲೆಯ ಗುತ್ತಲ ಪಟ್ಟಣ ಪಂಚಾಯಿತಿ 18 ವಾರ್ಡ್ ಗಳ ಪೈಕಿ ಕಾಂಗ್ರೆಸ್ 11 ಬಿಜೆಪಿ 6 ಇತರೇ 1ರಲ್ಲಿ ಗೆಲುವು ಸಾಧಿಸಿದೆ.

ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಕಾಂಗ್ರೆಸ್ ಮಡಿಲಿಗೆ. ಸಾರಿಗೆ ಸಚಿವ ಬಿ.ಶ್ರೀರಾಮುಲುಗೆ ಭಾರಿ ಮುಖಭಂಗವಾಗಿದೆ. ನಾಯಕನಹಟ್ಟಿ ಪ.ಪಂ.ನ 16 ವಾರ್ಡ್ ಗಳಲ್ಲಿ ಕಾಂಗ್ರೆಸ್ 9, ಪಕ್ಷೇತರ ಅಭ್ಯರ್ಥಿಗಳೂ 3 ವಾರ್ಡ್ ಗಳಲ್ಲಿ ಗೆಲುವು ಸಾಧಿಸಿದ್ದು,  ಬಿಜೆಪಿ ಖಾತೆ ತೆರೆಯದೆ ಬಿ.ಶ್ರೀರಾಮುಲುಗೆ ಮುಖಭಂಗ ಅನುಭವಿಸಿದ್ದಾರೆ. ಬೆಳಗಾವಿ ಜಿಲ್ಲೆ ಯಕ್ಸಂಬಾ ಪ.ಪಂ ಕಾಂಗ್ರೆಸ್​ ತೆಕ್ಕೆಗೆ. 17ವಾರ್ಡ್ ಗಳ ಪೈಕಿ ಕಾಂಗ್ರೆಸ್ 10, ಬಿಜೆಪಿ 1ರಲ್ಲಿ ಗೆಲುವು ಸಾಧಿಸಿದ್ದು ಸಚಿವೆ ಶಶಿಕಲಾ ಜೊಲ್ಲೆ ಸ್ವಗ್ರಾಮದಲ್ಲೇ ಕಾಂಗ್ರೆಸ್ ​ಗೆ ಗೆಲುವು  ದೊರಕಿದೆ.

ಇನ್ನು ಯಾದಗಿರಿಯ ಕಕ್ಕೇರಾ 4 ವಾರ್ಡ್ ಗಳಲ್ಲಿ ಕಾಂಗ್ರೆಸ್ ಗೆದ್ದಿದೆ. ಕುಕನೂರು ಪಟ್ಟಣ ಪಂಚಾಯತ್ನ ಸ್ವ ಕ್ಷೇತ್ರದಲ್ಲಿ ಸಚಿವ ಹಾಲಪ್ಪ ತೀವ್ರ ಮುಖಭಂಗ ವಾಗಿದ್ದು ಕಾಂಗ್ರೆಸ್ 10, ಬಿಜೆಪಿ 9 ರಲ್ಲಿ ಗೆಲುವು ಸಾಧಿಸಿದೆ. ಇನ್ನು ಕೊಪ್ಪಫನ ಕಾರಟಗಿ ಪುರಸಭೆಯಲ್ಲಿ ಕಾಂಗ್ರೆಸ್ 12 ಬಿಜೆಪಿ 10 ಇತರೆ1 ವಾರ್ಡ್ ಗಳಲ್ಲಿ ಜಯಸಾಧಿಸಿವೆ.

ಮತ್ತೊಂದೆಡೆ ಉಡುಪಿ ಜಿಲ್ಲೆ ಕಾಪು ಪುರಸಭೆ ಬಿಜೆಪಿ ಪಾಲಾಗಿದೆ. 23 ವಾರ್ಡ್ ಪೈಕಿ ಬಿಜೆಪಿ 12, ಕಾಂಗ್ರೆಸ್ 7, ಎಸ್ಡಿಪಿಐ 3, ಜೆಡಿಎಸ್ 1 ವಾರ್ಡ್ನಲ್ಲಿ ಗೆಲುವು ಸಾಧಿಸಿದೆ. ಹಾಗೂ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಹಾರೂಗೇರಿ ಪುರಸಭೆ ಬಿಜೆಪಿ ಪಾಲಾಗಿದೆ. 23 ವಾರ್ಡ್‌ಗಳ ಪೈಕಿ 15ವಾರ್ಡ್‌ಗಳಲ್ಲಿ ಜಯ ಸಾಧಿಸಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಕ್ಕಿದೆ. ಕಾಂಗ್ರೆಸ್ 7, ಬಿಜೆಪಿ 15, ಪಕ್ಷೇತರ 1 ಸ್ಥಾನ ಪಡೆದಿದ್ದಾರೆ. ಕಕ್ಕೇರಾ ಪುರಸಭೆಯಲ್ಲಿ‌ ಬಿಜೆಪಿ ಅಧಿಕಾರ ಕಳೆದುಕೊಂಡಿದೆ. ಬಿಜೆಪಿ ಶಾಸಕ ರಾಜುಗೌಡಗೆ ಬಾರಿ ಮುಖಭಂಗವಾಗಿದೆ.

ಬಿಡದಿ ಪುರಸಭೆಯಲ್ಲಿ ಜೆಡಿಎಸ್ ಗೆಲುವು ಸಾಧಿಸಿದೆ. 23 ವಾರ್ಡ್ ಗಳ ಪೈಕಿ 14 ವಾರ್ಡ್‌ ಗಳಲ್ಲಿ ಜೆಡಿಎಸ್‌ ಗೆ ಗೆಲುವು ಸಿಕ್ಕಿದೆ. 9 ವಾರ್ಡ್‌ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಬಿಡದಿ ಪುರಸಭೆಯಲ್ಲಿ ಖಾತೆ ತೆರೆಯುವಲ್ಲಿ ಬಿಜೆಪಿ ವಿಫಲವಾಗಿದೆ.

ENGLISH SUMMARY….

Results of elections held for 58 local bodies: CM Bommai’s ministers humiliated in own constituency
Bengaluru, December 30, 2021 (www.justkannada.in): The results of the local body elections held on December 27 are being announced today. Ministers Sriramulu and Shashikala Jolle, who are part of Chief Minister Basavaraj Bommai’s cabinet have been humiliated in their own constituencies.
While Congress has gained an upper hand in Banakpura Town Municipal Council, Chief Minister Bommai has faced a huge set back in his own constituency. While Congress has bagged 14 seats, BJP has got only 7 and 2 independent. Likewise, even in Guttala Town Municipal Council in Haveri District, out of the total 18 wards, Congress has won in 11, BJP has won in only 6, followed by 1 independent.
In Bidadi JDS has registered victory. Out of the total number of 23 wards, JDS has won in 14 wards, Congress has won in 9 wards and BJP failed to open its account.
Keywords: Local body elections/ results announced/ CM humiliated in own constituency

Key words: 58 Local bodies-election-result-Announce