ದೀಪಾವಳಿ ಧಮಾಕ ! 50% ಡಿಸ್ಕೌಂಟ್ ನೀಡಿದ ಪೈಲ್ವಾನ್ !

Promotion

ಬೆಂಗಳೂರು, ಅಕ್ಟೋಬರ್ 26, 2019 (www.justkannada.in):  ದೀಪಾವಳಿ ಹಬ್ಬದ ಪ್ರಯುಕ್ತವಾಗಿ ಟಿಕೇಟ್​​ ದರವನ್ನು 50ರಷ್ಟು ಇಳಿಕೆ ಮಾಡಲು ಪೈಲ್ವಾನ್ ಚಿತ್ರತಂಡ ನಿರ್ಧರಿಸಿದೆ.

ಇತ್ತೀಚೆಗೆ ‘ಪೈಲ್ವಾನ್’ ಚಿತ್ರದ ಪೈರಸಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಇದರ ಬೆನ್ನಲ್ಲೇ ನಿರ್ಮಾಪಕಿ ಸ್ವಪ್ನಾ ಕೃಷ್ಣ ಪೈರಸಿ ವಿರುದ್ಧ ಸಮರ ಸಾರಿದ್ದರು.

ಇನ್ನೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿ ಎಂದು ಹೇಳಿಕೊಂಡಿದ್ದ ರಾಕೇಶ್, ತಾನು ಪೈರಸಿ ವಿಡಿಯೋವನ್ನು ಶೇರ್ ಮಾಡಿರುವುದಾಗಿ ಒಪ್ಪಿಕೊಂಡಿದ್ದ. ಎಲ್ಲ ಮೆಟ್ಟಿ ನಿಂತು ಗೆದ್ದ ಚಿತ್ರ ತಂಡ ಇದೀಗ ನಿಜ ಅಭಿಮಾನಿಗಳಿಗಾಗಿ ಟಿಕೆಟ್ ದರದಲ್ಲಿ ಡಿಸ್ಕೌಂಟ್ ನೀಡುತ್ತಿದೆ.