ನನ್ನ ಹತ್ಯೆಗೆ 50 ಲಕ್ಷ ಸುಪಾರಿ ನೀಡಲಾಗಿತ್ತು- ಸ್ಪೋಟಕ ಹೇಳಿಕೆ ನೀಡಿದ ಅನರ್ಹ ಶಾಸಕ ನಾರಾಯಣಗೌಡ…

Promotion

ಮಂಡ್ಯ ,ನ,8,2019(www.justkannada.in):  ನನ್ನ ಹತ್ಯೆಗೆ 50 ಲಕ್ಷ ಸುಪಾರಿ ನೀಡಲಾಗಿತ್ತು ಎಂದು ಕೆ.ಆರ್ ಪೇಟೆ ಅನರ್ಹ ಶಾಸಕ ನಾರಾಯಣಗೌಡ ಹೇಳಿಕೆ ನೀಡಿದ್ದಾರೆ.

ಕೆ.ಆರ್ ಪೇಟೆ ತಾಲ್ಲೂಕಿನ ಆಘಲಯದಲ್ಲಿ ಮಾತನಾಡಿರುವ ಅನರ್ಹ ಶಾಸಕ ನಾರಾಯಣಗೌಡ, ನನ್ನನ್ನು ಕೊಲ್ಲಲು 50 ಲಕ್ಷಕ್ಕೆ ಸುಪಾರಿ ನೀಡಲಾಗಿತ್ತು. ಭಗವಂತನ ಶಿಕ್ತಿ ನನ್ನನ್ನು ಕೊಲ್ಲೋಕೆ ಬಿಡುತ್ತಾ..? ದಾವೋದ್ ಮತ್ತು ಛೋಟಾ ರಾಜನ್ ವಲ್ಡ್ ಫೇಮಸ್ ಆಗಿದ್ರು. ಅವರ ಬಳಿಯೇ ಹೊಡೆಯಲು ಆಗ್ಲಿಲ್ಲ. ನಮ್ಮ ತಾಲ್ಲೂಕಿನವರು  ಹೊಡೆಯಲು ಸಾಧ್ಯವೇ ಎಂದು ತಮ್ಮ ಹತ್ಯೆಯ ಸುಪಾರಿ ಸಂಚಿನ ಬಗ್ಗೆ ಹೊಸಬಾಂಬ್ ಸಿಡಿಸಿದರು.

ಅಂದಿನಿಂದ ನಾನು ಗನ್ ಮ್ಯಾನ್ ಇಟ್ಟುಕೊಂಡಿದ್ದೀನಿ. ನಾನು ಹೆದರುವ ಪ್ರಶ್ನೆಯೇ ಇಲ್ಲ.  ಲೂಟಿ ಮಾಡಿರುವವರಿಗೆ ಕೆಟ್ಟವರಿಗೆ ಪಾಠ ಕಲಿಸುವುದೇ ನನ್ನ ಗುರಿ ಎಂದು ಅನರ್ಹಶಾಸಕ ನಾರಾಯಣಗೌಡ ತಿಳಿಸಿದರು.

ಇತ್ತೀಚಿಗಷ್ಟೇ ಅಪರೇಷನ್ ಕಮಲ ಕುರಿತು ಮಾತನಾಡಿದ್ದ  ಅನರ್ಹ ಶಾಸಕ ನಾರಾಯಣಗೌಡ, ರಾಜೀನಾಮೆಗೂ ಮುನ್ನ ಬಿಎಸ್ ಯಡಿಯೂರಪ್ಪ ಭೇಟಿಯಾಗಿ ಮಾತುಕತೆ ನಡೆಸಿದ್ದವು. ಈ ವೇಳೆ ಬಿಎಸ್ ಯಡಿಯೂರಪ್ಪ ಸಿಎಂ ಆಗಲು ಬೆಂಬಲ ಕೋರಿದ್ದರು. ಹೀಗಾಗಿ ರಾಜೀನಾಮೆ ಕೊಟ್ಟಿದ್ದವು. ಕ್ಷೇತ್ರದ ಅಭಿವೃದ್ಧಿಗೆ 1 ಸಾವಿರ ಕೊಟಿ ಕೋಡುವುದಾಗಿ ಹೇಳಿದ್ದರು ಎಂದು ಹೇಳಿಕೆ ನೀಡಿದ್ದರು.

Key words: 50 lakh –murder-kr pet-disqualified mla-Narayana Gowda