ಅನುಭವ ಮಂಟಪ ನಿರ್ಮಾಣಕ್ಕೆ 50 ಕೋಟಿ ರೂ. ಮಂಜೂರು: ಸಿಎಂ ಬಿ.ಎಸ್.ಯಡಿಯೂರಪ್ಪ ಆದೇಶ

Promotion

ಬೆಂಗಳೂರು, ಸೆಪ್ಟೆಂಬರ್ 22, 2019 (www.justkannada.in): ಅನುಭವ ಮಂಟಪ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ 50 ಕೋಟಿ ರೂ. ಅನುದಾನ ಮಂಜೂರು ಮಾಡಿದ್ದಾರೆ.

ಈ ಕುರಿತು ಆದೇಶ ಹೊರಡಿಸಿರುವ ಸಿಎಂ ಯಡಿಯೂರಪ್ಪ, 50 ಕೋಟಿ ಅನುದಾನ ಮಂಜೂರು ಮತ್ತು ಸದ್ಯ ಕೆಲಸ ಆರಂಭಿಸಲು ಬಸವ ಕಲ್ಯಾಣ ಅಭಿವೃದ್ಧಿ ಪ್ರಾಧಿಕಾರಕ್ಕೆ ತಕ್ಷಣವೇ 20 ಕೋಟಿ ಅನುದಾನ ಬಿಡುಗಡೆ ಮಾಡಲು ಆದೇಶ ನೀಡಿದ್ದಾರೆ.

12ನೇ ಶತಮಾನದಲ್ಲಿ ಬಸವಾದಿ ಶರಣರು ವಚನಗಳ ಮೂಲಕ ಜಗತ್ತಿನ ಮೊದಲನೆ ಪಾರ್ಲಿಮೆಂಟ್ ‘ಅನುಭವ ಮಂಟಪ’ ಕುರಿತು ವಿವರಿಸಿದಂತೆ ಮತ್ತು ಅವರ ಜೀವನದ ಬಗ್ಗೆ ಹಾಗೂ ಅವರು ಸಾರಿದ ವಿಚಾರಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಮಾದರಿಯಲ್ಲಿ ಒಂದು ವಿನೂತನ ಅನುಭವ ಮಂಟಪ ನಿರ್ಮಾಣ ಮಾಡುವ ಅವಶ್ಯಕತೆ ಇರುತ್ತದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.