ಕೋವಿಡ್ ನಿಂದ 47 ಲಕ್ಷ ಜನ ಸಾವು: ಆದ್ರೆ ಸರ್ಕಾರ ಒಪ್ಪಿಕೊಳ್ಳುತ್ತಿಲ್ಲ- ಯೂತ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್.

Promotion

ಮೈಸೂರು,ಮೇ,13,2022(www.justkannada.in): ಕೋವಿಡ್ ನಿಂದ ಭಾರತದಲ್ಲಿ 47 ಲಕ್ಷ ಜನ ಸಾವನ್ನಪ್ಪಿದ್ದಾರೆ. ಆದರೆ ಸತ್ತ ಕುಟುಂಬಕ್ಕೆ ಪರಿಹಾರ ನೀಡಬೇಕಾಗುತ್ತದೆ ಎಂದು ಸರ್ಕಾರ ಇದನ್ನ ಒಪ್ಪಿಕೊಳ್ಳುತ್ತಿಲ್ಲ ಎಂದು ಯೂತ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಆರೋಪಿಸಿದರು.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ  ಯೂತ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ , ಕೋವಿಡ್ ನಿಂದ ಭಾರತದಲ್ಲಿ 47 ಲಕ್ಷ ಜನ ಸಾವನ್ನಪ್ಪಿದ್ದಾರೆ. ಆದರೆ ಸರ್ಕಾರದ ಪ್ರಕಾರ 4.7 ಲಕ್ಷ ಜನ ಸಾವನ್ನಪ್ಪಿದ್ದಾರೆ ಎಂದಿದ್ದಾರೆ. ಆದರೂ ಅವರಿಗೆ ಪರಿಹಾರ ಮಾತ್ರ ಸಿಗುತ್ತಿಲ್ಲ. ಕೋವಿಡ್ ನಿಂದ  ಜನರ ಜೀವನ ಇನ್ನು ಸಹಜ ಸ್ಥಿತಿಗೆ ಬಂದಿಲ್ಲ. ಸಂಕಷ್ಟಕ್ಕೆ ಸಿಲುಕಿದ ಕುಟುಂಬಕ್ಕೆ ಸರ್ಕಾರ ನೆರವಾಗಬೇಕಿತ್ತು.

ಬಿಜೆಪಿ ಸರ್ಕಾರ  ಕಮಿಷನ್ ದಂಧೆಯಲ್ಲಿ ಮುಳುಗಿಬಿಟ್ಟಿದ್ದಾರೆ. 10 ಪರ್ಸೆಂಟ್ ನಿಂದ 40 ಪರ್ಸೆಂಟ್ ಗೆ ಏರಿಕೆ ಆಗಿದೆ. ಈ ಬಗ್ಗೆ ಪ್ರತಿ ಜಿಲ್ಲೆಯಲ್ಲೂ ಜನರಿಗೆ ತಿಳಿಸುವ ಕೆಲಸ ಯೂತ್ ಕಾಂಗ್ರೆಸ್ ನಿಂದ ಮಾಡಲಿದ್ದೇವೆ ಎಂದು ಮೊಹಮ್ಮದ್ ನಾಲಪಾಡ್ ಹೇಳಿದರು.

Key words: 47 lakh-deaths –covid-Youth-Congress-President -Mohammed Nalapad.